Widgets Magazine

ಶಾಕಿಂಗ್! ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರಬಂದ ವಿಜಯ್ ಸೂರ್ಯ!

ಬೆಂಗಳೂರು| Krishnaveni K| Last Modified ಬುಧವಾರ, 12 ಜೂನ್ 2019 (08:42 IST)
ಬೆಂಗಳೂರು: ಕನ್ನಡ ಕಿರುತೆರೆಯ ಮೋಸ್ಟ್ ಹಾಟ್ ತಾರೆ ಎನಿಸಿಕೊಂಡಿರುವ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಗಿ ಅದೆಷ್ಟೋ ಹುಡುಗಿಯರ ಫೇವರಿಟ್ ತಾರೆ ಎನಿಸಿಕೊಂಡವರು.

 
ಒಂದು ರೀತಿಯಲ್ಲಿ ಅಗ್ನಿಸಾಕ್ಷಿ ಧಾರವಾಹಿಯ ಜೀವಾಳವೇ ಸಿದ್ಧಾರ್ಥ್ ಪಾತ್ರಧಾರಿ. ಆದರೆ ಇದೀಗ ಶಾಕಿಂಗ್ ಸುದ್ದಿಯೆಂದರೆ ಸಿದ್ಧಾರ್ಥ್ ಪಾತ್ರ ಅಗ್ನಿಸಾಕ್ಷಿಯಲ್ಲಿ ಕೊನೆಯಾಗಲಿದೆ.
 
ಈ ವಿಚಾರವನ್ನು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಸೂರ್ಯ ಬಹಿರಂಗಪಡಿಸಿದ್ದಾರೆ. ನನ್ನ ಪಾತ್ರ ಅಗ್ನಿಸಾಕ್ಷಿಯಲ್ಲಿ ಕೊನೆಗೊಳ್ಳಲಿದೆ ಎಂದು ವಿಜಯ್ ಹೇಳಿದ್ದಾರೆ. ತಮ್ಮ ಫೇವರಿಟ್ ಸಿದ್ಧಾರ್ಥ್ ಇನ್ನು ಧಾರವಾಹಿಯಲ್ಲಿ ಇರಲ್ಲ ಎಂದು ತಿಳಿದು ಬೇಸರಗೊಂಡಿರುವ ಅಭಿಮಾನಿಗಳು ನೀವಿಲ್ಲದೇ ನಾವು ಧಾರವಾಹಿ ನೋಡಲ್ಲ. ಪ್ಲೀಸ್ ಕಮ್ ಬ್ಯಾಕ್. ಬಿಟ್ಟು ಹೋಗಬೇಡಿ ಎಂದು ಸಂದೇಶ ಬರೆಯುತ್ತಿದ್ದಾರೆ. ಆದರೆ ಧಾರವಾಹಿಯ ಕತೆಯ ಪ್ರಕಾರ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೋಗಿ ಸೆಟಲ್ ಆಗುತ್ತಿದ್ದಾರೆ. ಇದರೊಂದಿಗೇ ಅವರ ಪಾತ್ರವೂ ಅಂತ್ಯ ಕಾಣುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :