ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಮಾಡಿರುವ ವಿನಂತಿ ಏನು ಗೊತ್ತಾ...?

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (06:38 IST)

ಬೆಂಗಳೂರು : ಫೆಬ್ರವರಿ 16 ರಂದು 41 ನೇ ವಸಂತಕ್ಕೆ ಕಾಲಿಡಲಿರುವ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ  ಟ್ವೀಟ್ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.


ಪ್ರತಿ ವರ್ಷವೂ  ದರ್ಶನ್ ಅವರ ಹುಟ್ಟುಹಬ್ಬವನ್ನು ಆಚರಿಸಲು ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳ ಮಹಾಪೂರವೇ ಹರಿದುಬರುತ್ತಿದ್ದು, ದರ್ಶನ್ ಅವರನ್ನು ಕಾಣಲು ಹರಸಾಹಸ ಮಾಡುತ್ತಿದ್ದರು. ಆದ್ದರಿಂದ ಈ ಬಾರಿ ದರ್ಶನ್ ಅವರು  ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಈ ವೇಳೆ ಹೆಚ್ಚಿನ ಜನಸಂಖ್ಯೆಯಲ್ಲಿ ಬರುವ ಅಭಿಮಾನಿಗಳು ತನ್ನನ್ನು ಕಾಣಲು ಮನೆಯ ಕಾಂಪೌಂಡ್ ಗೋಡೆ ಹತ್ತಿ ಸಾಹಸ ಮಾಡುತ್ತಾರೆ. ಇದರಿಂದ ತಮ್ಮ ನೆರೆಮನೆಯವರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಅಭಿಮಾನಿಗಳ ಜೀವಕ್ಕೂ ಹಾನಿಯಾಗುವ ಸಂಭವ ಹೆಚ್ಚಿದೆ.


ಆದ್ದರಿಂದ ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ ಶಾಂತಿ ಹಾಗೂ ಶಿಸ್ತಿನಿಂದ ಇರುವಂತೆ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ. ತನ್ನ ಈ ಕೋರಿಕೆಯನ್ನು ನಡೆಸಿಕೊಡುತ್ತಿರಿ ಎಂದು  ನಂಬಿರುದಾಗಿ ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿ ಕೂಡ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತಿ ಅಭಿಷೇಕ್ ಜತೆ ನಟಿಸಲು ಐಶ್ವರ್ಯ ಹಿಂದೇಟು ಹಾಕುತ್ತಿರುವುದು ಯಾಕೆ...?

ಮುಂಬೈ : ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರ ...

news

ನೇಹಾ ಧುಪಿಗೆ ಇನ್ನಷ್ಟು ಅಂಗಾಂಗ ತೋರ್ಸಿ, ಸೆಕ್ಸಿಯಾಗಿ ವರ್ತಿಸಿ ಎಂದವನಿಗೆ ಏನ್ ಮಾಡಿದ್ಳು ಗೊತ್ತಾ?

ನೇಹಾ ಧುಪಿಯಾ ಜೊತೆ ಯಾವುದೇ ಕಾರಣಕ್ಕೂ ಮೆಸ್ ಮಾಡಿಕೊಳ್ಳಬೇಡಿ. ಟ್ವಿಟ್ಟಿಗನೊಬ್ಬ "ಇನ್ನಷ್ಟು ಅಂಗಾಂಗ ...

news

ಕತ್ರಿನಾ ಕೈಫ್, ಸ್ನೇಹಿತೆ ಆಲಿಯಾ ಭಟ್ ವಿವಾಹಕ್ಕಾಗಿ ಕಾಯುತ್ತಿದ್ದಾರಾ?

ಎರಡು ಪ್ರಮುಖ ಮಹಿಳೆಯರ ಬಾಲಿವುಡ್‌ನಲ್ಲಿ ಕಣ್ಣಿಗೆ ಕಣ್ಣು ಹಾಕಿ ನೋಡಲು ಸಾಧ್ಯವಾಗದ ದಿನಗಳು ಹಳೆಯದಾಗಿವೆ. ...

news

ಥಗ್ಸ್ ಆಫ್ ಹಿಂದೂಸ್ಥಾನ್: ಕತ್ರಿನಾ ಕೈಫ್‌ಳ ವೀಡಿಯೋ ನೋಡಿದ್ರೆ ದಂಗಾಗುವಿರಿ

ಕತ್ರಿನಾ ಕೈಫ್ ಅವರ ಮುಂಬರುವ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ಥಾನ್‌‌ನಲ್ಲಿ ಅಮೀರ್ ಖಾನ್, ಅಮಿತಾಭ್ ಬಚ್ಚನ್ ...

Widgets Magazine
Widgets Magazine