ಮದಕರಿ ಚಿತ್ರಗಳ ವಿವಾದದ ಬಗ್ಗೆ ಸುದೀಪ್ ಹೇಳಿದ್ದೇನು?

ಬೆಂಗಳೂರು, ಗುರುವಾರ, 11 ಅಕ್ಟೋಬರ್ 2018 (08:06 IST)

ಬೆಂಗಳೂರು : ದರ್ಶನ್ ನಟಿಸಲಿರುವ ‘ಗಂಡುಗಲಿ ಮದಕರಿ ನಾಯಕ’ ಹಾಗೂ ಸುದೀಪ್ ನಟಿಸಲಿರುವ ‘ವೀರ ಮದಕರಿ’ ಸಿನಿಮಾದ ಬಗ್ಗೆ ಸಾಕಷ್ಟು ವಿವಾದಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಸುದೀಪ್ ಅವರು ಟ್ವೀಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಈ ಎರಡು ಸಿನಿಮಾಗಳ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದೆ. ಅಲ್ಲದೇ  ಅಭಿಮಾನಿಗಳು ಮಾತ್ರವಲ್ಲ ಮಠದೀಶರೊಬ್ಬರು ಜಾತಿ ಬಣ್ಣ ಬಳಿಯುತ್ತಿದ್ದು, ಈ ವಾದ ವಿವಾದಗಳು ವಿಕೋಪಕ್ಕೆ ಹೋಗಬಾರದು ಎಂಬ ಕಾರಣಕ್ಕೆ  ಇದೀಗ ಸುದೀಪ್ ಟ್ವೀಟರ್ ನಲ್ಲಿ ಪತ್ರವೊಂದರ ಮೂಲಕ ಸೃಷ್ಟೀಕರಣ ನೀಡಿದ್ದಾರೆ.


ತಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನೆಮಾ ಹಾಗೂ  ದರ್ಶನ್ ನಟಿಸಲಿರುವ ಸಿನಿಮಾ ಎರಡನ್ನು ಪ್ರೇಕ್ಷಕರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ ಎಂದು ತಿಳಿಸಿದ್ದಾರೆ.
ಅಲ್ಲದೇ ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತೇನೆ. ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಬೇಕು. ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗೂ ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಲ್ಟಿಪ್ಲೆಕ್ಸ್ ಗಳ ಮೇಲೆ ಕಿಡಿಕಾರಿದ ನಿರ್ದೇಶಕ ಪ್ರೇಮ್

ಬೆಂಗಳೂರು : ಬಿಗ್ ಬಜೆಟ್ ನಲ್ಲಿ ಮೂಡಿಬಂದ ‘ದಿ ವಿಲನ್’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರಬೇಕಾದ ನಿರ್ದೇಶಕ ...

news

ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ

ಬೆಂಗಳೂರು : ಇತ್ತೀಚೆಗೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ...

news

ಸೋನಾಲಿ ಬೇಂದ್ರೆ ಜೊತೆ ಡಿನ್ನರ್ ಮಾಡಿದ ಅನುಪಮ್ ಖೇರ್..

ಅನುಪಮ್ ಖೇರ್ ಸದ್ಯ ನ್ಯೂಯಾರ್ಕ್‌ನಲ್ಲಿದ್ದು ವೈದ್ಯಕೀಯ ಪರೀಕ್ಷೆಗಾಗಿ ಈಗಾಗಲೇ ನ್ಯೂಯಾರ್ಕ್‌ಗೆ ತೆರಳಿದ್ದ ...

news

ಆಸಿಡ್ ದಾಳಿ ಸಂತ್ರಸ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ?

2005 ರಲ್ಲಿ ಆಸಿಡ್ ದಾಳಿಗೆ ತುತ್ತಾದ ಲಕ್ಷ್ಮೀ ಅಗರ್‌ವಾಲ್‌ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ...