ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿಗೆ ಅಮ್ಮನಿಂದ ಸಿಕ್ತು ವಿಶೇಷವಾದ ಉಡುಗೊರೆ!

ಬೆಂಗಳೂರು, ಮಂಗಳವಾರ, 30 ಜನವರಿ 2018 (06:12 IST)

ಬೆಂಗಳೂರು : ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಫಿನಾಲೆ ಮುಗಿದಿದ್ದು, ಮನೆಯವರನ್ನು ಹಾಗು ವೀಕ್ಷಕರನ್ನು ಸಂಗೀತದ ಮೂಲಕ ರಂಜಿಸುತ್ತಿದ್ದ ಚಂದನ್ ಶೆಟ್ಟಿ ಅವರು ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

 
ಬಿಗ್ ಬಾಸ್ ನಲ್ಲಿ ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು  ಚಂದನ್ ಶೆಟ್ಟಿ ಅವರು ಹೇಳಿದ್ದರು. ಇದೀಗ ಅವರ ತಾಯಿ  ಬಿಗ್ ಬಾಸ್ ನಲ್ಲಿ ಗೆದ್ದ ತಮ್ಮ ಮಗನಿಗೆ ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ನಾಯಿಮರಿಗೆ ‘ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಅದರಂತೆ ಆ ನಾಯಿಮರಿಗೆ ‘ಆಪಲ್’ ಎಂದು ಹೆಸರಿಡಲಾಗಿದೆ.


 
ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿಯಂತೆ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರಂತೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಅವರು ಪ್ರಾಣಿಗಳನ್ನು ಸಾಕಲು ಸಾಧ್ಯವಾಗಲಿಲ್ಲವೆಂದು ಇದೀಗ ಅವರ ತಾಯಿ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಅವರಿಗೆ ಗೆಲುವಿನ ಖುಷಿಯ ಜೊತೆಗೆ ಈ ಸರ್ಪೈಸ್ ಉಡುಗೊರೆಯನ್ನು  ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಿಯಾಲಿಟಿ ಶೋ ಬಿಗ್ ಬಾಸ್ ಚಂದನ್ ಶೆಟ್ಟಿ ಉಡುಗೊರೆ ನಾಯಿ ಬೆಕ್ಕು Bigboss Gift Dog Cat Chandan Shetty Reality Show

ಸ್ಯಾಂಡಲ್ ವುಡ್

news

ನಟ ದರ್ಶನ್ ಗೆ ಬಿರುದು ನೀಡಿದವರು ಯಾರು ಗೊತ್ತಾ...? ಅದಕ್ಕೆ ಕಾರಣವೂ ಇದೆಯಂತೆ!

ಬೆಂಗಳೂರು : ಕರುನಾಡ ಜನರ ಮನಗೆದ್ದಿರುವ ಸ್ಯಾಡಲ್ ವುಡ್ ನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ...

news

ಬಿಗ್ ಬಾಸ್ ವೇದಿಕೆ ಮೇಲೆ ಜೆಕೆ ಕಣ್ಣೀರು ಹಾಕಿದ್ದು ನೋಡಿ ಕಿಚ್ಚ ಸುದೀಪ್ ಕಣ್ಣೀರು!

ಬೆಂಗಳೂರು: ಬಿಗ್ ಬಾಸ್ ಫೈನಲ್ ವೇದಿಕೆಯಲ್ಲಿ ಫೈನಲಿಸ್ಟ್ ಜಯರಾಂ ಕಾರ್ತಿಕ್ ಹಳೆಯ ನೆನಪೊಂದನ್ನು ನೋಡಿ ...

news

ಬೆಳ್ಳಂದೂರು ಕೆರೆ ಬಗ್ಗೆ ಜಗ್ಗೇಶ್ ಹೇಳಿದ ಸತ್ಯ

ಬೆಂಗಳೂರು: ಬೆಳ್ಳಂದೂರು ಕೆರೆಯ ಬಗ್ಗೆ ಕೇಳಿದರೇ ಜನ ಬೆಚ್ಚಿ ಬೀಳುವಂತಾಗಿದೆ. ಅಂದು ಕೆರೆಯನ್ನು ನೋಡಿದವರು ...

news

ಕನ್ನಡದ ಕಂದಮ್ಮಗಳಿಗೆ ರಿಯಲ್ ಹೀರೋ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಮೇಲೆ ಎಷ್ಟು ಅಭಿಮಾನ ಇದೆ ...

Widgets Magazine
Widgets Magazine