ನಕಲಿ ಆಧಾರ್ ಕಾರ್ಡ್ ಬಳಸಿ ನಟಿ ಊರ್ವಸಿ ರೌಟೆಲಾ ಹೆಸರಿನಲ್ಲಿ ರೂಂ ಬುಕ್ ಮಾಡಿದವರು ಯಾರು…?

ಮುಂಬೈ, ಶನಿವಾರ, 31 ಮಾರ್ಚ್ 2018 (05:37 IST)

ಮುಂಬೈ : ಇತ್ತೀಚೆಗೆ ಆಧಾರ್ ಕಾರ್ಡ್ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಬಾಲಿವುಡ್ ನಟಿಯೊಬ್ಬರ ನಕಲಿ ಆಧಾರ್ ಕಾರ್ಡ್ ಬಳಸಿ ವ್ಯಕ್ತಿಯೊಬ್ಬ ಹೋಟೆಲ್ ರೂಂ ಬುಕ್ ಮಾಡಿದ ಘಟನೆ ನಡೆದಿದೆ.


ಬಾಲಿವುಡ್‌ ನಟಿ ಊರ್ವಸಿ ರೌಟೆಲಾ ಅವರ ನಕಲಿ ಆಧಾರ್‌ ಕಾರ್ಡ್ ಬಳಸಿ ನಟಿಯ ಹೆಸರಲ್ಲೇ ವ್ಯಕ್ತಿಯೋರ್ವ ಫೈವ್‌ ಸ್ಟಾರ್‌ ಹೋಟೆಲ್‌‌ವೊಂದರಲ್ಲಿ ರೂಮ್‌ ಬುಕ್ ಮಾಡಿದ್ದಾನೆ.


ಬುಧವಾರ ರಾತ್ರಿ ಊರ್ವಸಿ ರೌಟೆಲಾ ಅವರು ಕಾರ್ಯಕ್ರಮವೊಂದರ ನಿಮಿತ್ತ ಮುಂಬೈನ ಸಬರ್‌ಬನ್ ಬಂದ್ರಾ ಬಳಿಯಿರುವ ಹೋಟೆಲ್‌ಗೆ ಬಂದಿದ್ದಾಗ ಅಲ್ಲಿಯ ಸಿಬ್ಬಂದಿ ತಮ್ಮ ಹೆಸರಿನಲ್ಲಿ ರೂಮ್‌ ಬುಕ್ ಮಾಡಿರುವ ವಿಚಾರವನ್ನು ನಟಿಗೆ ತಿಳಿಸಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಆದರೆ, ನಟಿಯ ಸಹಾಯಕ ಕಾರ್ಯದರ್ಶಿ ತಾವು ರೂಮ್ ಬುಕ್ ಮಾಡಿಲ್ಲ ಎಂದು ಹೇಳಿದ್ದಾರೆ.
 ಈ ಘಟನೆಗೆ ಸಂಬಂಧಿಸಿದಂತೆ ನಟಿ ಮುಂಬೈನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಕಲಿ ಆಧಾರ್ ಕಾರ್ಡ್‌ ಬಳಿಸಿರುವ ವ್ಯಕ್ತಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಮಾಧುರಿ ದೀಕ್ಷಿತ್ ಮೇಲಿನ ಮುನಿಸಿನಿಂದ ‘ಶಿದ್ದತ್’ ಚಿತ್ರತಂಡದಿಂದ ಹೊರಬಂದ ಸಂಜಯ್ ದತ್!

ಮುಂಬೈ : ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಶಿದ್ದತ್’ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ನಟ ...

news

ಚುನಾವಣಾ ಪ್ರಚಾರಕ್ಕೆ ಬರುವುದರ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಹೀಗ್ಯಾಕೆ ಹೇಳಿದ್ರು!

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಗೆಲುವು ಸಾಧಿಸಲು ಅನೇಕ ...

news

'ಚಿರಂಜೀವಿ ಜೊತೆ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತದೆ-ಅಮಿತಾಬ್ ಬಚ್ಚನ್

ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ನಟಿಸುತ್ತಿರುವ ‘ ಸೈ.ರಾ. ನರಸಿಂಹ ರೆಡ್ಡಿ‘ ಚಿತ್ರದಲ್ಲಿ ...

news

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಸುದ್ದಿ ಮಾಧ್ಯಮಗಳ ಮೇಲ್ಯಾಕೆ ಸಿಟ್ಟು…?

ಹೈದರಾಬಾದ್ : ಸುದ್ದಿ ಮಾಧ್ಯಮಗಳು ಜಗತ್ತಿನ ಆಗುಹೋಗುಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಿಳಿಸುತ್ತವೆ ...

Widgets Magazine
Widgets Magazine