ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬರು ಹೀಗ್ಯಾಕೆ ಉಪವಾಸ ಮಾಡ್ತಿರೋದು?

ಬೆಂಗಳೂರು, ಶುಕ್ರವಾರ, 9 ಮಾರ್ಚ್ 2018 (06:20 IST)

ಬೆಂಗಳೂರು : ಇತ್ತಿಚೆಗೆ ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಮಾಡುತ್ತಿರುವ ರಂಪಾಟದ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ಅದೇರೀತಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟ ಕಿಚ್ಚ ಸುದೀಪ್ಅವರನ್ನು ನೋಡುವ ಸಲುವಾಗ ಅತಿರೇಕವಾಗಿ ವರ್ತಿಸಿದ ಘಟನೆ ಕನಕಪುರ ಬಳಿಯ ಸಾತನೂರಿನ ನಾಗಸೊಂಡೆ ಗ್ರಾಮದಲ್ಲಿ ನಡೆದಿದೆ.


ಕಿಚ್ಚ ಶಿವು ಎಂಬಾತ ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿದ್ದು ಈತ ಸುದೀಪ್ ಅವರನ್ನು ಭೇಟಿ ಮಾಡಬೇಕೆಂದು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವುದಾಗಿ ತಿಳಿಸಿ ಈ ಕುರಿತು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದನ್ನು ನೋಡಿದ ಸುದೀಪ್ ಅವರ ಇತರೆ ಅಭಿಮಾನಿಗಳು ’ಸುದೀಪ್ ಅವರನ್ನು ಭೇಟಿ ಮಾಡಲು ಸಾವಿರ ದಾರಿಯಿದೆ. ಅದನ್ನ ಬಿಟ್ಟು ಈ ರೀತಿ ಮಾಡುವುದು ತಪ್ಪು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯ ತಿಳಿದ ನಟ ಸುದೀಪ್ ಅವರು ‘ನೀವು ಚೆನ್ನಾಗಿದ್ದರೆ ನನಗೆ ಖುಷಿ. ಉಪವಾಸ ಮಾಡಿ ನನಗೆ ನೋವು ಕೊಡಬೇಡಿ. ಭೇಟಿ ಮಾಡಲು ಬೇಕಾಗಿರುವುದು ಸಮಯ, ಪ್ರೀತಿ ಹಾಗೂ ತಾಳ್ಮೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಚಿರಋಣಿ’ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಅವರ ಜೀವನಾಧರಿತ ಚಿತ್ರದಲ್ಲಿ ನಟಿಸಲಿರುವ ನಟಿ ಯಾರು ಗೊತ್ತಾ...?

ಮುಂಬೈ : ಒಂದು ಕಾಲದಲ್ಲಿ ಪಡ್ಡೆ ಹುಡುಗರ ಹೃದಯ ಬಡಿತವನ್ನು ಹೆಚ್ಚಿಸುತ್ತಿದ್ದ ಕೇರಳ ಮೂಲದ ನಟಿ ಶಕೀಲಾ ಅವರ ...

news

ಕತ್ರಿನಾ ಕತ್ರಿನಾ ಕಾರು ನೋಡಿ ದೀಪಿಕಾ ಪಡುಕೋಣೆ ಮುಖ ತಿರುಗಿಸಿಕೊಂಡು ಬಂದಿದ್ಯಾಕೆ…?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ವರ್ಕೌಟ್ ಮಾಡಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ...

news

ಮಾಸ್ತಿಗುಡಿ ಚಿತ್ರದ ನಿರ್ಮಾಪಕನ ಜತೆ ಕಾಂಗ್ರೆಸ್ ಶಾಸಕನ ಪುತ್ರಿ ಪರಾರಿ!

ಬೆಂಗಳೂರು : ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರ ಜೊತೆ ಕಾಂಗ್ರೆಸ್ ಶಾಸಕರೊಬ್ಬರ ಪುತ್ರಿ ...

news

ಶ್ರೀದೇವಿ ಮಗಳು ಜಾಹ್ನವಿ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿದ್ದು ಯಾಕೆ ಗೊತ್ತಾ…?

ಮುಂಬೈ : ಇತ್ತಿಚಿಗಷ್ಟೇ ಮೃತಪಟ್ಟ ಬಾಲಿವುಡ್ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ 21ನೇ ವರ್ಷದ ...

Widgets Magazine
Widgets Magazine