ಅಂತೂ ಹಸೆಮಣೆ ಏರಿಬಿಟ್ರಾ ಹಾಟ್ ನಮಿತಾ! (ವೀಡಿಯೋ ನೋಡಿ)

ಚೆನ್ನೈ, ಶುಕ್ರವಾರ, 24 ನವೆಂಬರ್ 2017 (12:14 IST)

ಚೆನ್ನೈ: ಕ್ರೇಜಿಸ್ಟಾರ್ ಅಭಿನಯದ ನೀಲಕಂಠ, ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಯನದ ಇಂದ್ರ ಸೇರಿದಂತೆ ಒಂದಿಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸಿಗೆ ಕಚಗುಳಿ ಇಟ್ಟ ನಟಿ ನಮಿತಾ ತಮ್ಮ ಆತ್ಮೀಯ ಗೆಳೆಯ ಚೌಧರಿ ಜತೆ ಹಸೆಮಣೆ ಏರಿದ್ದಾರೆ.


ನಮಿತಾ ಅವರ ಆತ್ಮೀಯ ಗೆಳೆಯನಾಗಿರುವ ವೀರಾ ಜತೆ ಜೀವನವನ್ನು ಹಂಚಿಕೊಳುತ್ತಿರುವುದಕ್ಕೆ ನಮಿತಾ ಸಖತ್ ಖುಷಿಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಕುಟುಂಬ ವರ್ಗದವರ  ನಡುವೆ  ತಿರುಪತಿಯ ಇಸ್ಕಾನ್ ನಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ವೀರಾಂದ್ರ ಚೌಧರಿ ಅವರು ಶರ್ವಾನಿಯಲ್ಲಿ ಮಿಂಚಿದರೆ, ಇನ್ನು ಮದುಮಗಳಾಗಿ ಮಿಂಚುತ್ತಿರುವ ನಮಿತಾ  ಕೇಸರಿ ಬಣ್ಣದ ರೇಷ್ಮೆ ಸೀರೆ, ಹಾಗೂ ಒಡವೆಗಳಿಂದ ಸಿಂಗಾರಗೊಂಡು ನಾಚಿಕೆಯಿಂದ ಕೆಂಪಾಗಿದ್ದರು.


ಮದುವೆಯ ಮೊದಲಿನ ಸಂಪ್ರದಾಯದಲ್ಲಿ ನೀಲಿ ಬಣ್ಣದ ಸೀರೆಯಲ್ಲಿ ನಮಿತಾ ಕಾಣಿಸಿಕೊಂಡಿದ್ದರು. ವೀರಾಂದ್ರ ಚೌಧರಿ ನೀಲಿ ಹಾಗೂ ಕಂದುಬಣ್ಣದ ಶರ್ವಾನಿ ತೊಟ್ಟಿದ್ದರು. ಇವರಿಬ್ಬರೂ ತಮ್ಮ ಸ್ನೇಹಿತ ವರ್ಗದವರಿಗಾಗಿ ಚೆನ್ನೈನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ನಮಿತಾ ಮದುವೆ ವೀರಾಂದ್ರ ಖುಷಿ Namitha Marriage Veerandra Happy

ಸ್ಯಾಂಡಲ್ ವುಡ್

news

ಸರಿಗಮಪ ಲಿಟಲ್ ಚಾಂಪ್ಸ್ 14 ರಲ್ಲಿ ರಾಜೇಶ್ ಕೃಷ್ಣನ್ ಸ್ಥಾನಕ್ಕೆ ಬರಲಿರುವ ತೀರ್ಪುಗಾರರು ಯಾರು ಗೊತ್ತಾ?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ 13 ಕಂತು ಮುಗಿಸಿರುವ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ...

news

ನಟಿ ರಮ್ಯಾಗೆ ಮದರ್ ಥೆರೇಸಾ ಅವಾರ್ಡ್

ನವದೆಹಲಿ: ನಟಿ ರಮ್ಯಾ ಸಮಾಜಸೇವೆ ಪರಿಗಣಿಸಿ ಪ್ರತಿಷ್ಠಿತಿ ಮದರ್ ಥೆರೇಸಾ ಅವಾರ್ಡ್ ನೀಡಿ ಗೌರವಿಸಲಾಗಿದೆ. ...

news

ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ ಅನಾರೋಗ್ಯ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ...

news

ಉಸ್ಸಪ್ಪಾ…! ಕೊನೆಗೂ ‘ಅಮೃತವರ್ಷಿಣಿ’ ಕತೆ ಮುಗಿಯಿತು!

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ...

Widgets Magazine