ಒಬ್ಬರ ಅಕೌಂಟ್ಗೆ 200 ಶೌಚಾಲಯಗಳ ಬಿಲ್: ಫಲಾನುಭವಿಗಳ ಅಕೌಂಟಗೆ ಇಲ್ಲ ಹಣ?.

ಬೆಳಗಾವಿ, ಗುರುವಾರ, 12 ಜುಲೈ 2018 (16:32 IST)


ಒಂದೆಡೆ ಪ್ರದಾನಿ ಸ್ವಚ್ಚ ಬಾರತ ಎಂದು ದೇಶವನ್ನು ಶುಚಿಗೊಳಿಸಲು ಹೊರಟರೆ ರಾಜ್ಯದ ಅದಿಕಾರಿಗಳು ಸ್ವಚ್ಚ ಬಾರತ ಯೋಜನೆಯಡಿಯಲ್ಲಿ ಲಕ್ಷ ಲಕ್ಷ ಹಣವನ್ನು ನುಂಗಲು ಹೊರಟಿದ್ದಾರೆ.

ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷ ಲಕ್ಷ ಹಣವನ್ನು ನುಂಗಲು ಹೊರಟಿದ್ದಾರೆ.  2017-18 ರ ಸ್ವಚ್ಚ ಭಾರತ ಮಿಶನ್ ಯೋಜನೆಯಡಿಯಲ್ಲಿ 200 ಕ್ಕೂ ಹೆಚ್ಚು ಶೌಚಾಲಯಗಳ ಬಿಲ್ ನ್ನ ಆಯಾ ಫಲಾನುಭವಿಗಳ ಅಕೌಂಟ್ ಗೆ ಜಮಾ ಆಗಬೇಕಿತ್ತು, ಆದರೆ ಆ ಹಣ ಕೇವಲ ಒಬ್ಬರ ಗುತ್ತಿಗೆದಾರನ ಅಕೌಂಟ್ ಗೆ ಸಂದಾಯ ಮಾಡಿದ್ದಾರೆ. ಆದರೆ ಶೌಚಾಲಯಗಳು ಎಲ್ಲವೂ ಕಳಪೆ ಮಟ್ಟದ ಶೌಚಾಲಯಗಳಿವೆ. ಇನ್ನು ಪಂಚಾಯತ್ ಅಭಿವೃದ್ದಿ ಇಲಾಖೆ ಅದಿಕಾರಿಗಳು ಈ ಗೋಲ್ಮಾಲ್ ಮಾಡಿದ್ದಾರೆ.  ಈ ಕುರಿತು ಅದಿಕಾರಿಗಳನ್ನ ಕೇಳಿದರೆ ಪೋನ್ ಕೂಡಾ ರಿಸಿವ್ ಮಾಡಲ್ಲ. ಆದರೆ ಈ ಅವ್ಯವಹಾರವನ್ನ ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ ನಾಯಿಕಮನಿ ಅವರು ಮಾಹಿತಿ ಹಕ್ಕಿನಲ್ಲಿ ಬಯಲಿಗೆ ಎಳದಿದ್ದಾರೆ.

ಈ ಕುರಿತು ಫಲಾನುಭವಿಗಳನ್ನ ಕೇಳಿದರೆ ನಮ್ಮ ಅಕೌಂಟಗೆ ಹಣ ಬಂದಿಲ್ಲ. ತಯಾರಾಗಿದ್ದ ಶೌಚಾಲಯವನ್ನು ತಂದಿಟ್ಟಿದ್ದಾರೆ. ಆದರೆ ಈ ಕುರಿತು  ಸಂಭಂದಪಟ್ಟವರನ್ನು ಸಂಪರ್ಕಿಸಿದರೆ ಸರಿಯಾದ ಮಾಹಿತಿಯನ್ನ ನಿಡುತ್ತಿಲ್ಲ. ಇನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಕಾರ್ಯದರ್ಶಿ ಅವರು ಇಂತಹ ಪ್ರಕರಣಗಳಲ್ಲಿ ತಪ್ಪುಮಾಡಿದವರ ವಿರುದ್ದ ಕ್ರಮ ಜರುಗಿಸಬೇಕು ಎಂದು  ರಾಜ್ಯದ ಎಲ್ಲ ಜಿ ಪಂ ಕಾರ್ಯನಿರ್ವಾಹಕ ಅದಿಕಾರಿಗಳಿಗೆ ಆದೆಶ ಮಾಡಿದ್ದರು. ಇನ್ನುವರೆಗೂ ಯಾವುದೆ ಕ್ರಮವನ್ನು ಜರುಗಿಸದೆ ಅದಿಕಾರಿಗಳು ಸುಮ್ಮನಿರುವದು ಅನುಮಾನಕ್ಕೆ ಎಡೆಮಾಡಿದಂತಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಕ್ರಮ ಮದ್ಯ ಮಾರಾಟ; ಮಹಿಳಾ ಸಂಘಟನೆಯಿಂದ ಸಾರಾಯಿ ಜಪ್ತಿ

ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆ ಮಹಿಳಾ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ ಸಾರಾಯಿ ಜಪ್ತಿ ...

news

ಟ್ರ್ಯಾಕ್ಟರ್ ಮಗುಚಿ ಐಎಎಸ್ ನಿವೃತ್ತ ಅಧಿಕಾರಿ ಸಾವು

ಟ್ರ್ಯಾಕ್ಟರ್ ಮಗುಚಿ ನಿವೃತ್ತ ಐಎಎಸ್ ಅಧಿಕಾರಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

news

4 ವರ್ಷಗಳ ನಂತರ ಹೇಮಾವತಿ ಜಲಾಶಯ ಭರ್ತಿ

ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ ಜೀವನದಿ ಹೇಮಾವತಿ, ಭರ್ತಿ ಹಂತ ...

news

ತ್ರಿಬಲ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

ತನ್ನ ಪತ್ನಿಯ ಅಣ್ಣನ ಮನೆಗೆ ಬೆಂಕಿ ಹಚ್ಚಿದ್ದ ಹಂತಕನ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ...

Widgets Magazine
Widgets Magazine