83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭ

ಮೈಸೂರು, ಗುರುವಾರ, 23 ನವೆಂಬರ್ 2017 (09:17 IST)

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನ.24ರಿಂದ 26ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ನವವಧುವಿನಂತೆ ಮೈಸೂರು ನಗರ ಕಂಗೊಳಿಸುತ್ತಿದೆ.

kannada sahitya sammelana" width="600" />

ಇಲ್ಲಿನ ಮಹಾರಾಜ ಕಾಲೇಜಿನ ಆವರಣದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ನಂತೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಪ್ರಮುಖ ರಸ್ತೆಗಳುದ್ದಕ್ಕೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹಾಗೂ ಸಾಹಿತಿಗಳ ಕಟೌಟ್ ಗಳನ್ನು ಅಳವಡಿಸಲಾಗಿದೆ.

ಎಲ್ಇಡಿ ಬಲ್ಬಗಳನ್ನು ಅಳವಡಿಸಲಾಗಿದ್ದರಿಂದ ರಾತ್ರಿಯಲ್ಲೂ ಮೈಸೂರು ಬೆಳಕಿನಿಂದ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಳವಡಿಸಿರುವ ಕನ್ನಡದ ಬಾವುಟಗಳು  ಸಮ್ಮೇಳನಕ್ಕೆ ಸ್ವಾಗತ ಮಾಡುತ್ತಿವೆ.

ಮಹಾರಾಜ ಕಾಲೇಜಿನ ಮೈದಾನದಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ವಿಶಾಲವಾದ ಪೆಂಡಾಲ್ ನಲ್ಲಿ ನಡೆಯಲಿದ್ದು, ಅಂದಾಜು 25 ಸಾವಿರ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಪೆಂಡಾಲ್ ನಿರ್ಮಿಸಲಾಗಿದೆ. ಸಮ್ಮೇಳನ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರನ್ನು ಮೆರವಣಿಗೆ ಮೂಲಕ ಸಾರೋಟಿನಲ್ಲಿ ಕರೆತರಲಾಗುತ್ತದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಲಿದ್ದು, ಅನೇಕ ಗಣ್ಯರು ಹಾಗೂ ಸಾಹಿತಿಗಳು ಸಮ್ಮೇಳನಕ್ಕೆ ಮೆರಗು ನೀಡಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಅಕ್ಷರ ಜಾತ್ರೆ ಇತಿಹಾಸ ಪುಟ ಸೇರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಕಿಂಗ್! ನಾಲ್ಕು ವರ್ಷದ ಬಾಲಕನಿಂದ ಗೆಳತಿಯ ಮೇಲೆ ಅತ್ಯಾಚಾರ!

ನವದೆಹಲಿ: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ದೆಹಲಿಯ ಮ್ಯಾಕ್ಸ್ ಫೋರ್ಟ್ ...

news

ಅನ್ಯಜಾತಿ ಯುವಕನೊಂದಿಗೆ ಪ್ರೀತಿ- ಮಗಳನ್ನು ಕೊಂದ ತಂದೆ

ಬೆಂಗಳೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿ ಮಾಡಿದ ಕಾರಣಕ್ಕೆ ಬಾಲಕಿಯನ್ನು ತಂದೆಯ ಕೊಲೆ ಮಾಡಿರುವ ಘಟನೆ ...

news

ನಾನು ಎಲ್ಲಾ ದೇವಸ್ಥಾನಗಳಿಗೂ ನುಗ್ಗಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ದೇವರ ಮೇಲೆ ನಂಬಿಕೆಯೇ ಇಲ್ಲ ಎಂದು ಟೀಕಿಸುತ್ತಿದ್ದವರಿಗೆ ಅವರೇ ಉತ್ತರ ...

news

ಮೋದಿ ಕುತ್ತಿಗೆ ಸೀಳಲು ರೆಡಿಯಾಗಿದ್ದಾರೆ ಬಿಹಾರಿಗಳು!

ನವದೆಹಲಿ: ಪ್ರಧಾನಿ ಮೋದಿ ಕುತ್ತಿಗೆ ಸೀಳಲು ಮತ್ತು ಕೈಕತ್ತರಿಸಲು ಬಿಹಾರದಲ್ಲಿ ಹಲವು ಮಂದಿ ಸಿದ್ಧರಾಗಿ ...

Widgets Magazine
Widgets Magazine