Widgets Magazine

ಎ. ಮಂಜು ಬಿಜೆಪಿ ಸೇರ್ಪಡೆ ನಿಶ್ಚಿತ

ಬೆಂಗಳೂರು| Jagadeesh| Last Modified ಭಾನುವಾರ, 17 ಮಾರ್ಚ್ 2019 (17:41 IST)
ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಸುಮಲತಾ ಅವ್ರ ನಿರ್ಧಾರದ ನಂತರ ತೀರ್ಮಾನ ಮಾಡ್ತೀವಿ. ಹಾಸನದಲ್ಲಿ ಎ. ಮಂಜು ಆದಷ್ಟು ಬೇಗ ಬಿಜೆಪಿಯನ್ನ ಸೇರುವರಿದ್ದಾರೆ. ಹೀಗಂತ ಬಿಜೆಪಿ ಕಾರ್ಯದರ್ಶಿ ಹೇಳಿದ್ದಾರೆ.

ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದು,
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ.

ಇಂದು ರಾತ್ರಿ ಅಥವಾ ನಾಳೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ. ರಾಜ್ಯ ಕೋರ್ ಕಮಿಟಿಯಲ್ಲಿನ ತೀರ್ಮಾನಗಳನ್ನ ಕೇಂದ್ರ ಸಮಿತಿ ಮುಂದೆ ಇಡಲಾಗ್ತಿದೆ. ಎಲ್ಲ 28 ಕ್ಷೇತ್ರಗಳಿಗೆ ಶಾರ್ಟ್ ಲಿಸ್ಟ್
ಮಾಡಿದ್ದೇವೆ ಅಂದ್ರು.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎ. ಮಂಜು ಈಗಾಗಲೇ ಯಡಿಯೂರಪ್ಪನವರ ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ರು.


ಇದರಲ್ಲಿ ಇನ್ನಷ್ಟು ಓದಿ :