ಬಾರ್ ಮುಂದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ

ದಾವಣಗೆರೆ, ಬುಧವಾರ, 11 ಜುಲೈ 2018 (14:04 IST)

 


ಬಾರ್ ಮುಂದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಪಿಬಿ ರೋಡ್ ನಲ್ಲಿರುವ ಭವಾನಿ ಬಾರ್ ಮುಂಭಾಗ ನಡೆದಿದೆ. 

ಕುಡಿದ ಮತ್ತಿನಲ್ಲಿ ಬಿದ್ದಿರುವ ವ್ಯಕ್ತಿಯ ಬ್ಯಾಗ್ ನಿಂದ ಕೆಳಗೆ ಆಧಾರ್ ಕಾರ್ಡ್ಗಳು ಕೆಳಗೆ ಬಿದ್ದಿವೆ. ಅಲ್ಲದೇ ಕುಡಿದ ಮತ್ತಿನಲ್ಲಿ ಕುಡುಕ ವ್ಯಕ್ತಿಯೊಬ್ಬ ಅಲ್ಲೇ ಮಲಗಿದ್ದ. ಇದರಿಂದ ಅನುಮಾನಗೊಂಡು ಸಾರ್ವಜನಿಕರು ಕುಡುಕ ವ್ಯಕ್ತಿಯನ್ನು ಮಾತನಾಡಿದಿದ್ದಾರೆ. ಆದ್ರೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ‌ಎಚ್ಚರವಾಗಿಲ್ಲ.

ಇದರಿಂದ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದು ಆಧಾರ್ ಕಾರ್ಡ್ ನಲ್ಲಿ ಇರುವ ಮೊಬೈಲ್ ನಂಬರ್ ಗೆ ಕಾಲ್ ಮಾಡಿ ಕೆಲವರಿಗೆ ಆಧಾರ್ ಕಾರ್ಡ್ ತಲುಪಿಸಿದ್ರು. ನಕಲಿ ಆಧಾರ್ ಕಾರ್ಡ್ ಗಳ ಜಾಲ ಇರುವ ಬಗ್ಗೆ ಸಾರ್ವಜನಿಕರು ಅನುಮಾನಗೊಂಡಿದ್ದು. ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಕುಡುಕನ ಬಳಿಗೆ ಎಲ್ಲಿಂದ ಬಂದವು? ಎನ್ನುವುದೇ ಪ್ರಶ್ನೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಾರ್ ಮುಂಭಾಗ ಸಿಕ್ಕ ಆಧಾರ್ ಕಾರ್ಡ್ಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಮನ ಬೇರೆ ಕಡೆ ಸೆಳೆದು ಕಳ್ಳತನ: ಕುಖ್ಯಾತ ಕಳ್ಳರ ಬಂಧನ

ಗಮನ ಬೇರೆ ಕಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರಾಜ್ಯ ಕಳ್ಳರ ಬಂಧಿಸುವಲ್ಲಿ ಶಹರ ಠಾಣೆ ...

news

ಡಿಕೆಶಿ ನೀಡಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರು ವಿಧಾನಸಭೆಗೆ ಗೈರು

ಬೆಂಗಳೂರು: ನಿನ್ನೆ ಕಾಂಗ್ರೆಸ್ ನಾಯಕ, ಸಚಿವ ಡಿಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ...

news

ಡಿಸಿಎಂ ಹುದ್ದೆ ಬರುತ್ತೆ, ಹೋಗುತ್ತೆ, ಮೊದಲು ಪಕ್ಷ ನೋಡಿಕೊಳ್ಳಿ: ಪರಮೇಶ್ವರ್ ಗೆ ಎಚ್ ಕೆ ಪಾಟೀಲ್ ತರಾಟೆ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಾಗಿದ್ದು, ...

news

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ ಕೆ ಪಾಟೀಲ್ ರೋಷಾವೇಷ

ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಹಿರಿಯ ಶಾಸಕ ಎಚ್ ಕೆ ...

Widgets Magazine