ರಾಶಿಗಟ್ಟಲೇ ಆಧಾರಕಾರ್ಡ ಪತ್ತೆ ಪ್ರಕರಣ: ತನಿಖೆಗೆ ಆದೇಶ

ದಾವಣಗೆರೆ, ಶುಕ್ರವಾರ, 13 ಜುಲೈ 2018 (15:25 IST)


 
 

ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ನಲ್ಲಿ ಪತ್ತೆಯಾಗಿದ್ದ ರಾಶಿ ಗಟ್ಟಲೇ ಆಧಾರ ಕಾರ್ಡಗಳು ನಕಲಿ ಇರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಶಿಗಟ್ಟಲೆ ಸಿಕ್ಕ ಆಧಾರ್ ಕಾರ್ಡ್ ಪತ್ತೆ ಪ್ರಕರಣ ಕುರಿತು ಅಂಚೆ ಕಚೇರಿ ಅಧಿಕಾರಿಗಳು
ತನಿಖೆಗೆ ಆದೇಶಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ಮುಂಭಾಗದಲ್ಲಿ ಪತ್ತೆಯಾಗಿದ್ದ ಆಧಾರ್ ಕಾರ್ಡಗಳು, ನಕಲಿ ಆಧಾರ ಕಾರ್ಡ್ ಜಾಲ ಇರುವ ಶಂಕೆ ವ್ಯಕ್ತವಾಗಿವೆ. ಹೀಗಾಗಿ ತನಿಖೆಗೆ ಅಂಚೆ ಇಲಾಖೆ ತನಿಖೆಗೆ ಆದೇಶ ನೀಡಿದೆ. ಕುಡಿದು ಬಿದ್ದಿರುವ ವ್ಯಕ್ತಿ ಅಂಚೆ ಇಲಾಖೆಯ ಸಿಬ್ಬಂದಿ ಎಂದು ಅನುಮಾನ ವ್ಯಕ್ತಪಡಿದಿದ ಅಂಚೆ ಅಧಿಕಾರಿಗಳು.

ಬಾರ್ ಮುಂಭಾಗ ಸಿಕ್ಕ ಆಧಾರ್ ಕಾರ್ಡ್ ಗಳಲ್ಲಿ ಒಂದಕ್ಕೆ ಮಾತ್ರ ಪೋಸ್ಟಲ್ ಸ್ಟಾಂಪ್ ಹಚ್ಚಿದ ಹಿನ್ನಲೆ ಮತ್ತಷ್ಟು ಅನುಮಾನಗಳು ಮೂಡತೊಡಗಿವೆ. ಆಧಾರ್ ಕಾರ್ಡ್ ಹಂಚಿಕೆ ಮುಂಚೆ ಅಕ್ರಮ ನಡೆದಿದೆಯೋ ಎನ್ನುವ  ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ. ತನಿಖೆ ನಡೆಸಿದ ನಂತರ ಸತ್ಯ ಬಯಲಿಗೆ ಬರಲಿದೆ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಾಲತಾಣದಲ್ಲಿ ಅಂಬೇಡ್ಕರ್ ಗೆ ಅವಮಾನ: ರಾಮಸೇನಾ ಕಾರ್ಯಕರ್ತನಿಗೆ ಧರ್ಮದೇಟು

ಸಾಮಾಜಿಕ ಜಾಲ ತಾಣದಲ್ಲಿ ಸಂವಿಂಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರಗೆ ಅವಮಾನ ಮಾಡಿರುವ ಘಟನೆಗೆ ...

news

ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಕಾಗದದ ಹುಲಿ' ಎಂದು ಟೀಕಿಸಲು ಕಾರಣವೇನು?

ನವದೆಹಲಿ : ಕಳೆದ ಜೂನ್ ತಿಂಗಳಿನಿಂದ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಭಾರತ ಕಡಿವಾಣ ಹಾಕಿದೆ. ...

news

ನಟಿ ಪ್ರಿಯಾಂಕ ಚೋಪ್ರಾ ಗೆ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್ ಪಕ್ಷ

ಮುಂಬೈ : ರಾಜಕೀಯ ನಾಯಕರು ಭಾಷಣ ಮಾಡುವ ಭರದಿಂದ ಎಡವಿ ಅಪಹಾಸ್ಯಕ್ಕೆ ಗುರಿಯಾಗಿರುವುದನ್ನು ನಾವು ಹಲವು ಬಾರಿ ...

news

ಕಾಲೇಜ್ ಆಡಳಿತದ ತರಬೇತಿಯಲ್ಲಿ ಜೀವ ಕಳೆದುಕೊಂಡ ತಮಿಳುನಾಡಿನ ಹುಡುಗಿ

ಕೊಯಮತ್ತೂರಿನ ಖಾಸಗಿ ಕಾಲೇಜಿ ಒಂದರಲ್ಲಿ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿ ನಡೆಸಿದ ಡ್ರಿಲ್ ತರಬೇತಿಯಲ್ಲಿ ...

Widgets Magazine
Widgets Magazine