ಅಮಿತ್ ಶಾ ರಾಜ್ಯದಲ್ಲಿಯೇ ಠಿಕಾಣಿ ಹೂಡಲಿ, ನಷ್ಟವಿಲ್ಲ: ಸಿಎಂ ವಾಗ್ದಾಳಿ

ಕಲಬುರಗಿ, ಭಾನುವಾರ, 13 ಆಗಸ್ಟ್ 2017 (13:04 IST)

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೇಕಿದ್ದಲ್ಲಿ ಕರ್ನಾಟಕದಲ್ಲಿಯೇ ಠಿಕಾಣಿ ಹೂಡಲಿ. ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಹೇಳಿದ್ದಾರೆ.
ವೀರಶೈವ -ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರ ಕುರಿತಂತೆ ಬಿಜೆಪಿಯವರು ಕತ್ತರಿ ಇಟ್ಟುಕೊಂಡು ಸಮಾಜ ಒಡೆಯುತ್ತಿದ್ದಾರೆ. ಸಮಾಜವನ್ನು ಒಡೆಯುವುದೇ ಬಿಜೆಪಿಯ ಕಾಯಕವಾಗಿದೆ ಎಂದು ಆರೋಪಿಸಿದರು. 
 
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸಗಳ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತವಾಗಿದೆ. ಪ್ರಧಾನಿ ಮೋದಿ ಸರಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ವಿಪಕ್ಷಗಳನ್ನು ನಿರ್ನಾಮ ಮಾಡಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.
 
ಕಾಂಗ್ರೆಸ್ ಪಕ್ಷದ ಸರಕಾರ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.80 ರಷ್ಟು ಭರವಸೆಗಳನ್ನು ಈಡೇರಿಸಿದೆ. ಇನ್ನುಳಿದ ಶೇ.20 ರಷ್ಟು ಭರವಸೆಗಳನ್ನು ಪ್ರಸಕ್ತ ವರ್ಷದಲ್ಲಿ ಈಡೇರಿಸಲಾಗುವುದು ಎಂದು ತಿಳಿಸಿದ್ದಾರೆ.
 
ಮಹದಾಯಿ, ಎತ್ತಿನಹೊಳೆ, ಕಾವೇರಿ ವಿವಾದ ಸೇರಿದಂತೆ ಹಲವಾರು ರಾಜ್ಯ ನೀರಾವರಿ ಯೋಜನೆಗಳ ಬಗ್ಗೆ ಮಧ್ಯಸ್ಥಿಕೆ ವಹಿಸದೆ ರೈತರನ್ನು ಕಂಗಾಲನ್ನಾಗಿಸಿದ ಬಿಜೆಪಿ ನಾಯಕರು ಇದೀಗ ರೈತರನ್ನು ಓಲೈಸಲು ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆದಿಚುಂಚನಗಿರಿಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ...

news

ಪಾರ್ಕ್ ಅವಘಡ: ಬಾಲಕಿ ತಲೆಯ ಮೇಲೆ ರಾಡ್ ಬಿದ್ದು ಸಾವು ......

ಬೆಂಗಳೂರು: ಪ್ರಿಯಾ ಎನ್ನುವ ಬಾಲಕಿಯೊಬ್ಬಳು ಪಾರ್ಕ್‌ನಲ್ಲಿ ಆಟವಾಡುತ್ತಿದ್ದಾಗ ಆಕೆಯ ತಲೆಯ ಮೇಲೆ ರಾಡ್ ...

news

ಭಾರತೀಯ ಸೇನೆಯಿಂದ ಮೂವರು ಕುಖ್ಯಾತ ಉಗ್ರರ ಹತ್ಯೆ

ಕಾಶ್ಮಿರ: ಜಮ್ಮು ಕಾಶ್ಮಿರದ ಶೋಪಿಯಾನ್‌‌ನಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ...

news

ರಾಜ್ಯ ಬಿಜೆಪಿ ಘಟಕದ ಕಾರ್ಯವೈಖರಿಗೆ ಅಮಿತ್ ಶಾ ಅಸಮಾಧಾನ

ಬೆಂಗಳೂರು: ರಾಜ್ಯ ಘಟಕದೊಳಗಿನ ಪಕ್ಷಪಾತ, ದ್ವೇಷದ ವಿರುದ್ಧ ತೀವ್ರವಾದ ಎಚ್ಚರಿಕೆಯನ್ನು ನೀಡಿ ...

Widgets Magazine