ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಅಟೋ ಚಾಲಕನ ಬಂಧನ

ಬೆಂಗಳೂರು, ಬುಧವಾರ, 27 ಸೆಪ್ಟಂಬರ್ 2017 (19:28 IST)

ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ನೀಡಿದ ಆರೋಪದ ಮೇಲೆ ಅಟೋರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಟೋರಿಕ್ಷಾ ಚಾಲಕ 28 ವರ್ಷ ವಯಸ್ಸಿನ ರಾಜೇಶ್, ಕೆಂಪಾಪುರ ಬಡಾವಣೆಯ ನಿವಾಸಿಯಾಗಿದ್ದು, ಲೈಂಗಿಕ ದೌರ್ಜನ್ಯವೆಸಗಿದ ಬಾಲಕಿಯರ ಕುಟುಂಬಗಳಿಗೆ ಚಿರಪರಿಚಿತನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.   
 
ಕಳೆದ ಸೆಪ್ಟೆಂಬರ್ 23 ರಂದು ಬಾಲಕಿಯರ ಮನೆಗೆ ಆಗಮಿಸಿದ ರಾಜೇಶ್, ಮನೆ ಬಳಿ ಆಡುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಪೋಷಕರು ಮನೆಗೆ ಮರಳಿದ ನಂತರ ಬಾಲಕಿಯರು ರಾಜೇಶ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
 
ಇಬ್ಬರು ಬಾಲಕಿಯರ ಎರಡು ಕುಟುಂಬಗಳು ಪೊಲೀಸ್ ಠಾಣೆಯಲ್ಲಿ ಆರೋಪಿ ರಾಜೇಶ್ ವಿರುದ್ಧ ನೀಡಿದ ದೂರಿನ ಮೇರೆಗೆ ರಾಜೇಶ್‌ನನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವರುಣ್ ಗಾಂಧಿಯಲ್ಲಿ ನೆಹರು ಸಿದ್ಧಾಂತಗಳಿವೆ, ಬಿಜೆಪಿಗೆ ಅನರ್ಹ: ದಿಗ್ವಿಜಯ್ ಸಿಂಗ್

ನವದೆಹಲಿ: ರೋಹಿಂಗ್ಯ ಮುಸ್ಲಿಮರ ಬಗ್ಗೆ ನಿಲುವು ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸಂಸದ ವರುಣ್ ಗಾಂಧಿಯನ್ನು ...

news

ವಿಧಾನಪರಿಷತ್ ಸದಸ್ಯರೊಂದಿಗೆ ಸಿಎಂ ಸಭೆ

ಬೆಂಗಳೂರು: ಸಮಸ್ಯೆಗಳ ಬೇಡಿಕೆ ಈಡೇರಿಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿಧಾನಪರಿಷತ್ ಸದಸ್ಯರೊಂದಿಗೆ ಸಭೆ ...

news

17ರ ಬಾಲಕನ ಮೇಲೆ 29 ವರ್ಷದ ಅಂಟಿಯಿಂದ ನಿರಂತರ ರೇಪ್

ಮಾಪುಸಾ(ಗೋವಾ): ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯ ವಿರುದ್ಧ ದೂರು ...

news

ಮೈಸೂರಿನಲ್ಲಿ ವರುಣನ ಆರ್ಭಟ: ಕೆರೆ ಕಟ್ಟೆಗಳು ಒಡೆದು ಮನೆಗಳಿಗೆ ನುಗ್ಗಿದ ನೀರು

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಬೆನ್ನಲ್ಲೇ ನಗರದಲ್ಲಿ ಕಳೆದೆರಡು ದಿನಳಿಂಗ ಭಾರೀ ಮಳೆಯಾಗುತ್ತಿದೆ. ...

Widgets Magazine