Widgets Magazine
Widgets Magazine

13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಟೋ ಚಾಲಕ ಅರೆಸ್ಟ್

ಬೆಂಗಳೂರು, ಸೋಮವಾರ, 25 ಸೆಪ್ಟಂಬರ್ 2017 (17:31 IST)

Widgets Magazine

13 ವರ್ಷದ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಅತ್ಯಾಚಾರವೆಸಗಿದ್ದ 25 ವರ್ಷ ವಯಸ್ಸಿನ ಅಟೋ ಚಾಲಕನನ್ನು ಯಲಹಂಕಾ ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವೈದ್ಯರು ಬಾಲಕಿಯ ಮೇಲೆ ನಡೆದಿರುವುದನ್ನು ಖಚಿತಪಡಿಸಿದ ನಂತರ ಬಾಲಕಿಯ ಪೋಷಕರು ಆರೋಪಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯ ನಿವಾಸಿಯಾದ ಗಿರೀಶ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸೆಪ್ಟೆಂಬರ್ 12 ರಂದು ಶಾಲೆಯಿಂದ ಮನೆಗೆ ಮರಳಿದ್ದಳು. ಮನೆಯಲ್ಲಿ ಬಾಲಕಿ ಏಕಾಂಗಿಯಾಗಿರುವುದು ಕಂಡ ನೆರೆಮನೆಯ ಆರೋಪಿ ಗಿರೀಶ್ ಆಕೆಯ ಮೇಲೆ ಅತ್ಯಾಚಾರವೆಸಗಿ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿಸಿವೆ.
 
ಕಟ್ಟಡ ನಿರ್ಮಾಣ ದಿನಗೂಲಿ ಕಾರ್ಮಿಕರಾಗಿರುವ ಬಾಲಕಿಯ ಪೋಷಕರು, ಮಗಳು ಅನಾರೋಗ್ಯದಿಂದಿರುವುದು ಕಂಡು ವೈದ್ಯರ ಹತ್ತಿರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಖಚಿತಪಡಿಸಿದ್ದಾರೆ. ತದನಂತರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. 
 
ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಆರೋಪಿ ಗಿರೀಶ್ ಪರಾರಿಯಾಗಿದ್ದಾನೆ. ಆದರೆ. ಫೋನ್ ಕರೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
 
ಆರೋಪಿ ಗಿರೀಶ್‌ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಿರೀಶ್‌ಗೆ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದ್ದು, ನವೆಂಬರ್ ಕೊನೆಯ ವಾರದಲ್ಲಿ ವಿವಾಹ ದಿನಾಂಕ ನಿಗದಿಪಡಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗಿನ ವಿಡಿಯೋ ಶಶಿಕಲಾ ಬಳಿಯಿದೆ: ದಿನಕರನ್ ಬಾಂಬ್

ಚೆನ್ನೈ: ತಮಿಳುನಾಡಿನ ದಿವಂಗತ ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ತೆಗೆದ ...

news

ಮುಂದಿನ 3 ದಿನ ರಾಜ್ಯದಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಧಾರಾಕಾರ ಮಳೆಗೆ ರಾಜ್ಯದ ಹಲವೆಡೆ ಸಂಕಷ್ಟ ಎದುರಾಗಿದೆ. ...

news

ಮಯನ್ಮಾರ್`ನಲ್ಲಿ 28 ಹಿಂದೂಗಳ ಸಾಮೂಹಿಕ ಸಮಾಧಿ ಪತ್ತೆ

ಗಲಭೆ ಪೀಡಿತ ಮಯನ್ಮಾರ್`ನ ರಕೈನ್ ರಾಜ್ಯದಲ್ಲಿ 28 ಹಿಂದೂಗಳನ್ನ ಕೊಂದು ಸಾಮೂಹಿಕವಾಗಿ ಸಮಾಧಿ ಮಾಡಿರುವ ...

news

ಹಾಯ್ ಸೆಕ್ಸ್, ಹಲೋ ಸೆಕ್ಸಿ ಎಂದು ಚುಡಾಯಿಸಿದ ಯುವಕರಿಗೆ 6 ತಿಂಗಳು ಜೈಲು

ಮುಂಬೈ: ಹಾಯ್ ಸೆಕ್ಸಿ, ಹಲೋ ಸೆಕ್ಸಿ ಎಂದು ಯುವತಿಯರನ್ನು ಚುಡಾಯಿಸಿದ ಇಬ್ಬರು ಯುವಕರಿಗೆ ಕೋರ್ಟ್, 6 ತಿಂಗಳ ...

Widgets Magazine Widgets Magazine Widgets Magazine