ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿದ ಬಿಬಿಎಂಪಿ! ಕಾರಣವೇನು ಗೊತ್ತಾ?

ಬೆಂಗಳೂರು, ಶನಿವಾರ, 25 ಆಗಸ್ಟ್ 2018 (11:57 IST)


ಬೆಂಗಳೂರು: ಕೊಡಗು, ಕೇರಳದಲ್ಲಿ ಪ್ರವಾಹ ನೋಡಿಯೇ ತಲ್ಲಣಗೊಂಡಿದ್ದ ಬೆಂಗಳೂರಿಗೆ ಆತಂಕ ಕೊಡುವ ಸುದ್ದಿಯನ್ನು ಬಿಬಿಎಂಪಿ ಹೊರ ಹಾಕಿದೆ.
 
ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ಬಿಬಿಎಂಪಿ ನಗರದಲ್ಲಿ ಹೈ ಅಲರ್ಟ್ ಘೋಷಿಸಿದೆ.
 
ನಗರದ ಸುಮಾರು 60 ಪ್ರದೇಶಗಳನ್ನು ಅಪಾಯಕಾರಿ ಪ್ರದೇಶವಾಗಿ ಬಿಬಿಎಂಪಿ ಘೋಷಿಸಿದೆ. ಈ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಈ ಪ್ರದೇಶಗಳು ಮಳೆ ಬಂದರೆ ಅಪಾಯಕ್ಕೀಡಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಮತ್ತೊಂದು ಜಲಪ್ರಳಯಕ್ಕೆ ಸಿದ್ಧವಾಗಲು ಬೆಂಗಳೂರಿಗರಿಗೆ ಬಿಬಿಎಂಪಿ ಈಗಾಗಲೇ ಮುನ್ನಚ್ಚರಿಕೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈತ್ರಿ ಸರ್ಕಾರ ಎಂದರೆ ಬಲವಂತದ ಮದುವೆಯಂತೆ!

ಬೆಳಗಾವಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವೆಂದರೆ ಬಲವಂತದ ಮದುವೆಯಂತೆ ಎಂದು ಬಿಜೆಪಿ ಸಂಸದ ಸುರೇಶ್ ...

news

ಮತದಾರರ ಪಟ್ಟಿಯಲ್ಲಿ ಯಾರದೋ ಹೆಸರಿನ ಮುಂದೆ ಸನ್ನಿ ಲಿಯೋನ್, ಆನೆ, ಪಾರಿವಾಳದ ಫೋಟೋ!

ಲಕ್ನೋ: ಮತದಾರರ ಪಟ್ಟಿಯ ಎಡವಟ್ಟಿನ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಇದೀಗ ಉತ್ತರ ಪ್ರದೇಶದ ಬಾಲಿಯಾ ...

news

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ವಾರ್

ಬೆಂಗಳೂರು: ಕೊಡಗು ಪ್ರವಾಹ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ...

news

‘ಹೇಗೆ ನಡೆದುಕೊಳ್ಳಬೇಕೆಂದು ನಾವು ಹೇಳಿಕೊಡಬೇಕಾ?’: ಸಚಿವೆ ನಿರ್ಮಲಾ ವಿರುದ್ಧ ಡಿಸಿಎಂ ಪರಂ ಗರಂ

ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಕೊಡಗು ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ...

Widgets Magazine