ಶಾಸಕ ಜಮೀರ್ ಅಹಮ್ಮದ್ ಹೆಸರಲ್ಲಿ ಹಣ ಪಡೆದು ವಂಚಿಸಿದ ಯುವತಿ..!

ಬೆಂಗಳೂರು, ಶುಕ್ರವಾರ, 11 ಆಗಸ್ಟ್ 2017 (15:29 IST)

ಯುವತಿಯೊಬ್ಬಳು ಶಾಸಕ ಜಮೀರ್ ಅಹಮ್ಮದ್ ಹೆಸರಿನಲ್ಲಿ ಹಣ ಡಬ್ಲಿಂಗ್ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್`ನಲ್ಲಿ ನಡೆದಿದೆ.


ಸಮ್ರೀನ್ ಎಂಬ ಯುವತಿ 8 ಮಹಿಳೆಯರಿಂದ 5 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾಳೆಂದು ಆರೋಪಿಸಲಾಗಿದೆ. ಹಣ ಕೇಳಲು ಬಂದ ಮಹಿಳೆಯರಿಗೆ ಕೊನೆ ಬೆದರಿಕೆ ಹಾಕಿದ್ದಾಳೆಂದೂ ಸಹ ತಿಳಿದು ಬಂದಿದೆ. ಹಣ ಕಳೆದುಕೊಂಡ ನೊಂದ ಮಹಿಳೆ ತಸ್ಲೀಮಾ ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಸದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಸಕ ಜಮೀರ್ ಅಹಮ್ಮದ್, ವಂಚನೆ ಮಾಡಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಕಮೀಷನರ್ ಅವರಿಗೆ ಮನವಿ ಮಾಡಿದ್ಧಾರೆ. ನನ್ನ ಹೆಸರು ಹೇಳಿಕೊಂಡು ಬರುವ ವಂಚಕರಿಗೆ ಹಣ ಕೊಡಬೇಡಿ ಎಂದು ಜಮೀರ್ ಜನರಿಗೆ ಮನವಿ ಮಾಡಿದ್ಧಾರೆ. ಇದೇವೇಳೆ, ಪೊಲೀಸ್ ಠಾಣೆಗೂ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್`ನ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಜೆಡಿಎಸ್`ನಿಂದ ಅಮಾನತಾಗಿರುವ 7 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಕಾಲ ಕೂಡಿ ಬಂದಿದೆ. ಡಿಸೆಂಬರ್ ...

news

ಕೆರೆಗಳ ಡಿನೋಟಿಫಿಕೇಷನ್ ಗೆ ಕೇಂದ್ರದ ವಿರೋಧ

ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಡಿನೋಟಿಫಿಕೇಷನ್ ಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ...

news

ವಾರ್ತೆ ಓದುತ್ತಿರುವಾಗ ಪೋರ್ನ್ ವಿಡಿಯೋ ಪ್ಲೇ ಮಾಡಿದ ವಾಹಿನಿ!

ಲಂಡನ್: ಬಿಬಿಸಿ ವಾರ್ತೆ ಎಂದರೆ ಅದಕ್ಕೆ ತನ್ನದೇ ಆದ ಘನತೆಯಿದೆ. ಆದರೆ ಇದೇ ಬಿಬಿಸಿ ವಾಹಿನಿಯೊಂದು ಮಾಡಿದ ...

news

ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್.. ಎಳನೀರು ಮಾತ್ರ ಸಿಗುತ್ತೆ..?

ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಮತ್ತು ಇನ್ನುಳಿದ ...

Widgets Magazine