ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ-ಎಸ್.ಎಂ.ಕೃಷ್ಣ ಒತ್ತಾಯ

ಮಂಡ್ಯ, ಶನಿವಾರ, 20 ಜನವರಿ 2018 (15:47 IST)

ಮಂಡ್ಯ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ 'ಭಾರತ ರತ್ನ' ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಲಕ್ಷಾಂತರ ಜನರು ಶಿವಕುಮಾರ ಸ್ವಾಮೀಜಿಯವರನ್ನು ‘ನಡೆದಾಡುವ ದೇವರು’ ಎಂದೇ ಆರಾಧಿಸುತ್ತಾರೆ. ಅವರು ಭಾರತ ರತ್ನಕ್ಕೆ ಭಾಜನರಾಗುವುದನ್ನು ಜನ ಎದುರು ನೋಡುತ್ತಿದ್ದಾರೆ. ಕಾಯಕಯೋಗಿ ಆಗಿರುವ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.


‘111 ವರ್ಷದ ಶಿವಕುಮಾರ ಸ್ವಾಮೀಜಿ ಅವರು 8 ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಮಾಜದಲ್ಲಿನ ಕೆಟ್ಟ ಆಚರಣೆ, ಮೂಢನಂಬಿಕೆ ಮತ್ತು ತಾರತಮ್ಯ ತೊಲಗಿಸಲು ಶ್ರಮಿಸಿದ್ದಾರೆ. ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಸ್ವಾಮೀಜಿ ಅವರು ಮನುಕುಲಕ್ಕೆ ನೀಡಿದ ಸೇವೆಗೆ ಪ್ರತಿಯಾಗಿ ಮತ್ತು ಲಕ್ಷಾಂತರ ಭಕ್ತರ ನಿರೀಕ್ಷೆಯಂತೆ ‘ಭಾರತ ರತ್ನ’ವನ್ನು ಶಿವಕುಮಾರ ಸ್ವಾಮೀಜಿಗೆ ಪ್ರದಾನಿಸಬೇಕು. ಆ ಪುರಸ್ಕಾರಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಎಸ್ .ಎಂ ಕೃಷ್ಣ ಅವರು ಪತ್ರದಲ್ಲಿ ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕರುಳ ಕುಡಿಯ ಬರುವಿಕೆಗಾಗಿ ಕಾಯುತ್ತಿರುವ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ ಆರ್ಡರ್ನ್ (37) ತಮ್ಮ ಚೊಚ್ಚಲ ಮಗುವಿನ ...

news

ಮೋದಿಯ 'ಅಪ್ಪುಗೆ'ಗೆ ಕಾಂಗ್ರೆಸ್ ನವರ ಲೇವಡಿ; ಪ್ರಧಾನಿ ಕೊಟ್ಟ ತಿರುಗೇಟು ಏನು ಗೊತ್ತಾ...?

ನವದೆಹಲಿ: ನಾನೊಬ್ಬ ಸಾಮಾನ್ಯ ಮನುಷ್ಯ, ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ...

news

ಪಾಕ್ ನ ಗುಂಡಿನ ದಾಳಿಗೆ ಯೋಧ ಹಾಗೂ ಇಬ್ಬರು ನಾಗರಿಕರ ಸಾವು

ಜಮ್ಮು: ಸಾಂಬಾ ವಲಯದಲ್ಲಿ ಶುಕ್ರವಾರ ಪಾಕಿಸ್ತಾನದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ...

news

ಕಮಲ್ ಹಾಸನ್ ಜತೆ ಮೈತ್ರಿ ಮಾಡ್ತಾರಾ ರಜನಿಕಾಂತ್? ಸೂಪರ್ ಸ್ಟಾರ್ ಹೇಳಿದ್ದೇನು?

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ರಜನೀಕಾಂತ್ ಮತ್ತು ಕಮಲ್ ಹಾಸನ್ ಪ್ರತ್ಯೇಕ ...

Widgets Magazine
Widgets Magazine