ಬಿಜೆಪಿ ಕಾರ್ಯಕರ್ತ ಜುಬೇರ್ ಕೊಲೆ ಪ್ರಕರಣ: ಐವರ ಬಂಧನ

ಮಂಗಳೂರು, ಗುರುವಾರ, 12 ಅಕ್ಟೋಬರ್ 2017 (09:26 IST)

ಮಂಗಳೂರು: ಜುಬೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.


ಸುಹೇಲ್, ನಿಜಾಮುದ್ದೀನ್, ಮುಸ್ತಫಾ, ತಾಜುದ್ದೀನ್ ಮತ್ತು ಆಸಿಫ್ ಬಂಧಿತ ಆರೋಪಿಗಳು. ಹಿನ್ನೆಲೆ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸಂಚು ರೂಪಿಸಿದ್ದ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಅ. 4ರ ಸಂಜೆ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಬಳಿ ಜುಬೇರ್ ಮತ್ತು ಇಲಿಯಾಸ್ ನಿಂತಿದ್ದಾಗ ನಾಲ್ವರ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಜುಬೇರ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು.

ಇನ್ನು ಮಂಗಳೂರಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಮಟ್ಟ ಹಾಕುವ ನಿಟ್ಟಿನಲ್ಲಿ ಎರಡು ತಂಡ ರಚಿಸಲಾಗಿದೆ. ಸಿಸಿಬಿ ಸೇರಿದಂತೆ ಮತ್ತೊಂದು ತಂಡವೂ ಈ ಹೊಣೆ ಹೊತ್ತಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಕಾರ್ಯಕರ್ತ ಜುಬೇರ್ ಹಳೆ ವೈಷಮ್ಯ ಕಮಿಷನರ್ ಟಿ.ಆರ್.ಸುರೇಶ್ Murder Bjp Zubair

ಸುದ್ದಿಗಳು

news

‘ಚಂದ್ರನನ್ನು ಭೂಮಿಗೆ ತರುತ್ತೇನೆಂದು ಮೋದಿ ನಿಮಗೆ ಮಂಕುಬೂದಿ ಎರಚಬಹುದು’

ನವದೆಹಲಿ: ಮತ್ತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ...

news

ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಅಮರ್ಜಾ ಡ್ಯಾಂ

ಕಲಬುರ್ಗಿ: ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗಿದೆ. ಇದರಿಂದಾಗಿ ಜಲಾನಯನ ಪ್ರದೇಶಗಳಲ್ಲಿ ...

news

ಪರೋಲ್ ಮುಗಿಸಿ ಶಶಿಕಲಾ ಇಂದು ಮರಳಿ ಜೈಲಿಗೆ

ಬೆಂಗಳೂರು: ಅನಾರೋಗ್ಯಕ್ಕೊಳಗಾಗಿರುವ ಪತಿ ನಟರಾಜನ್ ಯೋಗ ಕ್ಷೇಮ ವಿಚಾರಿಸಲು ಐದು ದಿನಗಳ ಪರೋಲ್ ಪಡೆದು ...

news

ಕುಪ್ಪಣ್ಣ ಪಾರ್ಕ್ ಗೆ ಬಂತು ಮೊಸಳೆ

ಮೈಸೂರು: ಪಾರ್ಕ್ ನಲ್ಲಿ ಮೊಸಳೆ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಕುಪ್ಪಣ್ಣ ಪಾರ್ಕ್ ನಲ್ಲಿ ...

Widgets Magazine