Widgets Magazine
Widgets Magazine

ಬಿಜೆಪಿ ನಾಯಕರು ವಿಕೃತ ಮನೋಭಾವ ಬಿಡಲಿ: ರಾಮಲಿಂಗಾ ರೆಡ್ಡಿ

ಬೆಂಗಳೂರು, ಭಾನುವಾರ, 7 ಜನವರಿ 2018 (12:37 IST)

Widgets Magazine

ಬಿಜೆಪಿ ನಾಯಕರು ವಿಕೃತ ಮನೋಭಾವ ಬಿಡಬೇಕು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ಆಧಾರಗಳಿಲ್ಲದೇ ಯಾವುದೇ ಸಂಘಟನೆಯನ್ನು ನಿಷೇಧ ಮಾಡುವುದಕ್ಕಾಗುವುದಿಲ್ಲ. ವರದಿ ತರಿಸಿಕೊಂಡ ನಂತರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
ದೀಪಕ್ ರಾವ್ ಹತ್ಯೆಯಾಗಲಿ, ಬಶೀರ್ ಹತ್ಯೆಯಾಗಲಿ ತುಂಬಾ ನೋವು ತಂದಿದೆ. ಇಂತಹ ಹತ್ಯೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಒಂದು ವೇಳೆ ಘಟನೆಯಲ್ಲಿ ಯಾವುದೇ ಸಂಘಟನೆ ಭಾಗಿಯಾಗಿರುವುದು ಕಂಡು ಬಂದಲ್ಲಿ ಅದನ್ನು ನಿಷೇಧಿಸಲಾಗುವುದು ಎಂದರು.
 
ಯಾರನ್ನೇ ಆದ್ರೂ ಕೊಲ್ಲುವುದು ಹೇಯ ಕೃತ್ಯ. ಬಶೀರ್ ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯರೊಂದಿಗೆ ಚರ್ಚೆ ನಡೆಸಲಾಗಿದ್ದು 10 ಲಕ್ಷ ರೂ.ಪರಿಹಾರ ನೀಡಲಾಗುವುದು. ರಾಜ್ಯದಲ್ಲಿ ದಕ್ಷಿಣ ಕನ್ನಡ ಹೊರತುಪಡಿಸಿದರೆ ಬೇರೆ ಕಡೆ ಇಂತಹ ಘಟನೆಗಳು ನಡೆದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಿಂದು ಸಂಘಟನೆಗಳಿಂದಲೇ ಹತ್ಯೆಗಳಾಗುತ್ತಿವೆ: ಸಚಿವ ರಮಾನಾಥ್ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳು ಹಿಂದು ಸಂಘಟನೆಗಳಿಂದಲೇ ...

news

ಬಶೀರ್ ಸಾವಿನ ಕುರಿತು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು ಏನು ಗೊತ್ತಾ…?

ಮಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಅಹಮ್ಮದ್ ಬಶೀರ್ ನಗರದ ಎ.ಜೆ. ಆಸ್ಪತ್ರೆಯಲ್ಲಿ ಇಂದು (ಭಾನುವಾರ) ...

news

ಸ್ಯಾಂಡಲ್ ವುಡ್ ನ ಮತ್ತೊಬ್ಬ ಹಾಸ್ಯ ನಟನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಬೆಂಗಳೂರು : ಸ್ಯಾಂಡಲ್ ವುಡ್ ನ ಮತ್ತೊಬ್ಬ ಹಾಸ್ಯ ನಟನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ...

news

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಅಬ್ದುಲ್ ಬಶೀರ್ ನಿಧನ

ಮಂಗಳೂರು: ಕೊಟ್ಟಾರ ಚೌಕಿಯ ಬಳಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ...

Widgets Magazine Widgets Magazine Widgets Magazine