‘ಹೋಗ್ಬಿಟ್ಯಲ್ಲೇ ಯವ್ವಾ…’ ಬದುಕಿ ಬಾರದ ಕಾವೇರಿಗಾಗಿ ಹೆತ್ತವರ ರೋಧನ

ಬೆಳಗಾವಿ, ಮಂಗಳವಾರ, 25 ಏಪ್ರಿಲ್ 2017 (07:26 IST)

ಬೆಳಗಾವಿ: ಕೊಳವೆ ಬಾವಿಗೆ ಬಿದ್ದಿದ್ದಕಾವೇರಿ ಕೊನೆಗೂ ಬದುಕಿ ಬರಲಿಲ್ಲ. ಪೋಷಕರ ಕಣ್ಣೀರಿಗೆ ಕೊನೆಯಿಲ್ಲದಾಯಿತು.


 
ನಿನ್ನೆ ಬೆಳಿಗ್ಗೆ ಕಾವೇರಿ ಸಿಲುಕಿಕೊಂಡಿದ್ದ ಸ್ಥಳದ ಸಮೀಪಕ್ಕೆ ತಲುಪಿದ ರಕ್ಷಣಾ ಸಿಬ್ಬಂದಿಗೆ ದೊಡ್ಡ ಬಂಡೆ ಕಲ್ಲು ಸಿಲುಕಿಕೊಂಡು ರಕ್ಷಣೆಗೆ ಅಡ್ಡಿಯಾಯಿತು. ಇದರಿಂದಾಗಿ ಬಾಲಕಿಯನ್ನು ತಲುಪಲು ಇನ್ನೂ ತಡವಾಯಿತು.
 
ಕೊನೆಗೂ ಮಧ್ಯರಾತ್ರಿ 11.34 ರ ಸುಮಾರಿಗೆ ಕಾವೇರಿಯನ್ನು ಹೊರಗೆ ಕರೆತರಲು ಸಿಬ್ಬಂದಿ ಯಶಸ್ವಿಯಾದರು. ಆದರೆ ಕೊಳವೆ ಬಾವಿಯಿಂದ ಹೊರ ಬಂದಿದ್ದು, ಆಕೆಯ ಮೃತದೇಹವಾಗಿತ್ತು. ತಂದೆ ಹಾಗೂ ಕುಟುಂಬಸ್ಥರು ‘ನಗ್ತಾ ನಗ್ತಾ ನಮ್ಮ ಕಣ್ಣೆದುರು ಆಡ್ಕೊಂಡಿದ್ಯಲ್ಲೇ.. ಹೋಗ್ಬಿಟ್ಯಲ್ಲೇ..’ ಎಂದು ಅಳುತ್ತಿದ್ದರೆ ನೆರೆದಿದ್ದವರ ಕಣ್ಣು ಹನಿಗೂಡಿದವು. ಅತ್ತ ಕಾವೇರಿಯನ್ನು ಬದುಕಿಸಲಾಗಲಿಲ್ಲ ಎಂದು ಸಿಬ್ಬಂದಿಗಳೂ ಬೇಸರಿಸಿಕೊಂಡರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :  
ಕೊಳವೆ ಬಾವಿ ದುರಂತ ಕಾವೇರಿ ರಾಜ್ಯ ಸುದ್ದಿಗಳು Kaveri Borewell Tragedy State Newss

ಸುದ್ದಿಗಳು

news

ತಮಿಳುನಾಡಿನಲ್ಲಿ ಈಗ ವಜಾಗೊಳಿಸುವ ಪರ್ವ!

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ದೃಶ್ಯಗಳೇ ಬದಲಾಗಿವೆ. ಇದುವರೆಗೆ ಪಕ್ಷವನ್ನು ...

news

ಮುಂದಿನ ವರ್ಷದಿಂದ ಸರ್ಕಾರದಿಂದಲೇ ಡಾ. ರಾಜ್ ಕುಮಾರ್ ಜಯಂತಿ ಆಚರಣೆ: ಸಿಎಂ ಸಿದ್ದರಾಮಯ್ಯ

ಮುಂದಿನ ವರ್ಷದಿಂದ ಸರ್ಕಾರದಿಂದಲೇ ಡಾ. ರಾಜ್ ಕುಮಾರ್ ಜಯಂತಿ ಆಚರಿಸುವುದಾಗಿ ಸಿಎಂ ಸಿದ್ದರಾಮಯ್ಯ ...

news

ದೇಶಾದ್ಯಂತ ದನಕರುಗಳಿಗೆ ಆಧಾರ್ ರೀತಿಯ ನಂಬರ್

ದೇಶಾದ್ಯಂತ ಗೋರಕ್ಷಕದಳದ ದಾಳಿ ಹೆಚ್ಚುತ್ತಿರುವ ಸಂದರ್ಭದಲ್ಲಿ ದನಕರುಗಳಿಗೂ ಆಧಾರ್ ರೀತಿಯ ಏಕರೂಪದ ಗುರುತಿನ ...

news

ಸಿಎಂ ಗಮನಕ್ಕೆ ತರದೇ ಅವರ ಕಾರಿನ ರೆಡ್ ಲೈಟ್ ತೆಗೆದ ಸಿಬ್ಬಂದಿ

ಸಿಎಂ ಗಮನಕ್ಕೆ ತರದೇ ಅವರ ಕಾರಿನ ರೆಡ್ ಲೈಟ್ ತೆಗೆದಿರುವ ಬಗ್ಗೆ ವರದಿಯಾಗಿದೆ. ಮಾಧ್ಯಮಗಳು ಕಾರಿನಲ್ಲಿ ...

Widgets Magazine
Widgets Magazine