ಪೊಲೀಸರಿಂದ ಕಿಡ್ನಾಪರ್ಸ್ ಮೇಲೆ ಶೂಟೌಟ್: ಆರೋಪಿಗಳು ಅರೆಸ್ಟ್

ಬೆಂಗಳೂರು, ಗುರುವಾರ, 10 ಆಗಸ್ಟ್ 2017 (20:33 IST)

ಮೂವರು ಉದ್ಯಮಿಗಳನ್ನು ಅಪಹರಿಸಿ, ಬೆದರಿಸಿ 8 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ಕಿತ್ತುಕೊಂಡಿದ್ದ ಅಪಹರಣಕಾರರನ್ನು ಪೊಲೀಸರು ಶೂಟೌಟ್ ನಡೆಸಿ ಬಂಧಿಸಿದ್ದಾರೆ. 
ಉದ್ಯಮಿಗಳಾದ ಲಕ್ಷ್ಮಿನಾರಾಯಣ, ಮೊಹಮ್ಮದ್ ಷರೀಫ್ ಮತ್ತು ಹರೀಷ್ ಎನ್ನುವವರನ್ನು ಕಾರಿನಲ್ಲಿ ಅಪಹರಿಸಿ ಹಣ ಕಿತ್ತುಕೊಂಡಿದ್ದಾರೆ. ಆರೋಪಿಗಳು ಮತ್ತೊರ್ವ ಉದ್ಯಮಿ ಅಪಹರಿಸಲು ಸ್ಕೇಚ್ ಹಾಕುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳೆದ 10 ದಿನಗಳಲ್ಲಿ ಐವರು ಉದ್ಯಮಿಗಳನ್ನು ಅಪಹರಿಸಿದ್ದರು ಎನ್ನಲಾಗುತ್ತಿದೆ.
 
ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ಉದ್ಯಮಿ ಸುಧಾಕರ ಬಳಿ ಕೂಡಾ ಎರಡು ಲಕ್ಷ ರೂ.ಕಿತ್ತುಕೊಂಡಿದ್ದರು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಪೇದೆ ಭೈರಪ್ಪನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
 
ಪೊಲೀಸ್ ಸಿಬ್ಬಂದಿಯ ರಕ್ಷಣೆಗೆ ಧಾವಿಸಿದ ಬ್ಯಾಡರಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ಸತ್ಯನಾರಾಯಣ್‌, ಗುಂಡಿನ ದಾಳಿ ನಡೆಸಿದಾಗ ಆರೋಪಿಯಬ್ಬನಿಗೆ ಗುಂಡೇಟು ತಗುಲಿದೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪುತ್ರಿಯ ಮೇಲೆ 600 ಬಾರಿ ರೇಪ್ ಎಸಗಿದ ತಂದೆಗೆ 12 ಸಾವಿರ ವರ್ಷ ಶಿಕ್ಷೆ

ಕೌಲಾಲುಂಪುರ್: 15 ವರ್ಷದ ಪುತ್ರಿಯ ಮೇಲೆ 600 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿರುವುದು ಸಾಬೀತಾದಲ್ಲಿ ...

news

ವಾಸ್ತವತೆ ಅರಿಯಲು ಗ್ರಾಮಗಳಿಗೆ ಭೇಟಿ ನೀಡಿ: ಡಿಸಿಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್

ನವದೆಹಲಿ: ವಾಸ್ತವ ಸ್ಥಿತಿಗತಿಯನ್ನು ಅರಿಯಲು ಫೈಲ್‌ಗಳನ್ನು ದೂರವಿಟ್ಟು ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ...

news

ದೇಶವನ್ನು ಬಿಜೆಪಿ ಆಳುತ್ತಿರುವುದು ದುರದೃಷ್ಟಕರ ಸಂಗತಿ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿ ನಾಯಕರ ಜಗಳ ಬಿಡಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬರ್ತಿದ್ದಾರೆ ...

news

ಐಟಿ ದಾಳಿಯನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ: ಸಿಎಂ ಕಿಡಿ

ಮೈಸೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಗೆ ಹೆದರೋದಿಲ್ಲ. ಅನಗತ್ಯವಾಗಿ ಐಟಿ ದಾಳಿಯನ್ನೇ ...

Widgets Magazine