ಲಕ್ಷ ಲಕ್ಷ ವಂಚನೆ: ವಂಚಕಿ ಮೊಬೈಲ್ ಮಾಲಾ ಅರೆಸ್ಟ್

ಮೈಸೂರು, ಮಂಗಳವಾರ, 29 ಆಗಸ್ಟ್ 2017 (15:41 IST)

ಜನರನ್ನು ವಂಚಿಸಿ ಹಣ ಕೀಳುತ್ತಿದ್ದ ವಂಚಕಿ ಮೊಬೈಲ್ ಮಾಲಾ ಪೊಲೀಸರ ಅತಿಥಿಯಾಗಿದ್ದಾಳೆ.
ತನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿ ಶ್ರೀಮಂತರನ್ನು ಪರಿಚಯಿಸಿಕೊಳ್ಳುತ್ತಿದ್ದ ಮಾಲಾ ಅವರಿಂದ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ನಂತರ ಅವರಿಗೆ ಮೊಬೈಲ್ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸುತ್ತಿದ್ದಳು ಎನ್ನಲಾಗಿದೆ.
 
ಮಾಲಾಳ ಸೌಂದರ್ಯ ಸವಿಯುವ ಬಯಕೆಯಿಂದ ನಿರ್ಜನ ಪ್ರದೇಶಕ್ಕೆ ಬರುವ ಶ್ರೀಮಂತ ವ್ಯಕ್ತಿಯನ್ನು ಆಕೆಯ ಗೂಂಡಾಗಳು ಬೆದರಿಸಿ ಚೆಕ್ ಮೇಲೆ ಸಹಿಹಾಕಿಸಿಕೊಳ್ಳುತ್ತಿದ್ದರು. ನಂತರ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಬಂದ ನಂತರ ಬಿಡುಗಡೆ ಮಾಡುತ್ತಿದ್ದರು.
 
ಮಾಲಾಳ ವಂಚನೆಯ ಜಾಲಕ್ಕೆ ಬಿದ್ದ ವ್ಯಕ್ತಿಯೊಬ್ಬ ನಗರದ ಪೊಲೀಸ್ ಠಾಣೆಗೆ ತೆರಳಿ ಆಕೆಯ ವಿರುದ್ಧ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಾಲಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ವಯಂಘೋಷಿತ ದೇವಮಾನವ ರಾಮಪಾಲ್`ಗೆ 2 ಪ್ರಕರಣಗಳಲ್ಲಿ ರಿಲೀಫ್

ಹರ್ಯಾಣದ ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ರಾಮ್ ಪಾಲ್`ಗೆ ಎರಡು ಪ್ರಕರಣಗಳಲ್ಲಿ ಹರ್ಯಾಣದ ಹಿಸಾರ್ ಕೋರ್ಟ್ ...

news

ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಪಕ್ಷದಿಂದ ಹೊರಗೆ: ಜಿ.ಪರಮೇಶ್ವರ್

ಹಾವೇರಿ: ಪಕ್ಷ ವಿರೋಧ ಚಟುವಟಿಕೆ ಮಾಡಬೇಡಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಪಕ್ಷದಿಂದ ಹೊರಹಾಕುತ್ತೇವೆ ...

news

ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಚೀನಾಗೆ ತೆರಳಲಿರುವ ಪ್ರಧಾನಿ ಮೋದಿ

ನವದೆಹಲಿ: ಡೋಕ್ಲಾಮ್ ವಿವಾದ ಅಂತ್ಯಗೊಂಡ ಮಾರನೇ ದಿನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಬ್ರಿಕ್ಸ್ ...

news

ಸೆಪ್ಟೆಂಬರ್ 1ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್..?

ಸೆಪ್ಟೆಂಬರ್ 1ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಹುತೇಕ ಮುಹೂರ್ತ ಫಿಕ್ಸ್ ಆಗಿದೆ. ಎಚ್.ಎಂ. ರೇವಣ್ಣ, ...

Widgets Magazine