ರಾಜ್ಯದಲ್ಲಿ ಎಸೆತ್ತಿರುವ ಕೇರಳದ ಕೋಳಿ ತ್ಯಾಜ್ಯ?

ಮಂಗಳೂರು, ಶುಕ್ರವಾರ, 13 ಜುಲೈ 2018 (12:24 IST)


ರಾಜ್ಯದಿಂದ ಲಾರಿಯಲ್ಲಿ ತಂದು ಕೋಳಿ ತಾಜ್ಯ ಎಸೆಯುತ್ತಿರುವ  ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದರಿಂದ ಹಲವು ಅನುಮಾನಗಳು ಜನರನ್ನು ಕಾಡಲಾರಂಭಿಸಿದೆ. ಪದೇ ಪದೇ ಕೋಳಿ ತ್ಯಾಜ್ಯವನ್ನು ಲಾರಿಗಟ್ಟಲೇ ತಂದು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ರೋಸಿ ಹೋಗಿರುವ ಸ್ಥಳೀಯರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರೆಂಜ  ಎಂಬಲ್ಲಿ ಲಾರಿ ಯೊಂದರಲ್ಲಿ  ತುಂಬಿಸಿ  ತಂದಿದ್ದ  ಕೋಳಿ  ತಾಜ್ಯವನ್ನು ಅಪರಿಚಿತ  ವ್ಯಕ್ತಿಗಳು ರಸ್ತೆ ಬದಿ ಎಸೆದು ಹೋಗಿದ್ದು  ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ಈ ರೀತಿ ಕೋಳಿ ತಾಜ್ಯಗಳನ್ನು  ರಸ್ತೆ ಬದಿ ಎಸೆದು ಹೋಗುವುದರಿಂದ  ಸಾಂಕ್ರಾಮಿಕ  ರೋಗಗಳು  ಹರಡುವ  ಭೇಟಿ ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇದೇ ರೀತಿ ಅರ್ಲಪದವು  ಪಾಣಾಜೆ,  ಬೆಟ್ಟಂಪಾಡಿ,  ಬೇಂದ್ರ ತೀರ್ಥ ಮುಂತಾದ ಕಡೆಗಳಲ್ಲಿ ರಾತ್ರಿ ವೇಳೆ ಬಂದು ಲಾರಿ ಯಲ್ಲಿ ಕೋಳಿ ತಾಜ್ಯ  ತಂದು ಎಸೆಯಲಾಗುತ್ತಿದ್ದು,  ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಥಳೀಯರು ಪುತ್ತೂರು ಗ್ರಾಮಾಂತರ  ಠಾಣೆಗೆ  ದೂರು ನೀಡಿದ್ದಾರೆ. ಇಂದು ಮತ್ತೆ ಲಾರಿ ಯಲ್ಲಿ  ಕೋಳಿ ತಾಜ್ಯ ತಂದು ರೆಂಜದಲ್ಲಿ ಎಸೆಯಲಾಗಿದ್ದು , ಸ್ಥಳೀಯರು ಅವರನ್ನು ತರಾಟೆಗೆ  ತೆಗೆದು ಕೊಂಡಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೇರಳ ರಾಜ್ಯದಿಂದ ಲಾರಿ ಯಲ್ಲಿ ತಂದು ಕೋಳಿ ತಾಜ್ಯ ಎಸೆಯುತ್ತಿರುವ  ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾದಕ ವ್ಯಸನಿಗಳ ಬಗ್ಗೆ ಬೆಚ್ಚಿ ಬೀಳಿಸುವ ವರದಿ ಕೊಟ್ಟ ಶಾಸಕ ಆರ್ ಅಶೋಕ್

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೊಂದು ಉಡ್ತಾ ಪಂಜಾಬ್ ಆಗುತ್ತಿದೆಯೇ? ಇಂದು ವಿಧಾನಸಭೆ ಕಲಾಪದಲ್ಲಿ ...

news

ಕದ್ದ ಚಿನ್ನದ ಜತೆಗೆ ಕ್ಷಮಾಪಣೆ ಪತ್ರ ಬರೆದಿಟ್ಟು ಮರಳಿಸಿದ ಕಳ್ಳ!

ತಿರುವನಂತಪುರಂ: ಕಳ್ಳನ ಕೈಗೆ ಚಿನ್ನ ಸಿಕ್ಕರೆ ಮರಳಿ ಸಿಗುವುದುಂಟೆ? ಪೊಲೀಸರು ಹುಡುಕಿಕೊಟ್ಟರೆ ಕೆಲವೊಮ್ಮೆ ...

news

ಪಾಸ್ ಪೋರ್ಟ್ ಪರೀಕ್ಷೆ ಸಂದರ್ಭ ಮಹಿಳೆಯನ್ನು ತಬ್ಬಿಕೊಂಡ ಪೊಲೀಸ್ !

ನವದೆಹಲಿ: ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ...

news

ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರು

ನ್ಯೂಯಾರ್ಕ್ : ಪೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆಗೊಳಿಸಿದ ಸ್ವಂತ ಪರಿಶ್ರಮದಿಂದ ಉದ್ದಿಮೆ ಸ್ಥಾಪಿಸಿದ ...

Widgets Magazine
Widgets Magazine