ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಶುರುವಾಯಿತು ಐಟಿ ಸಂಕಷ್ಟ

ಬೆಂಗಳೂರು, ಭಾನುವಾರ, 3 ಸೆಪ್ಟಂಬರ್ 2017 (15:07 IST)

ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್‌ಟಿಐ ಕಾರ್ಯಕರ್ತ ರಾಮಮೂರ್ತಿ ಸಲ್ಲಿಸಿದ ದೂರಿನನ್ವಯ ತನಿಖೆ ಆರಂಭಿಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತನ ದೂರು ಆಧರಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ನೂರಾರು ಕೋಟಿ ರೂಪಾಯಿ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ರಾಮಮೂರ್ತಿ ಆದಾಯ ತೆರಿಗೆ ಇಲಾಖೆಗೆ 1638 ಪುಟಗಳ ದಾಖಲೆ ನೀಡಿದ್ದಾರೆ.
 
ಆದಾಯ ತೆರಿಗೆ ಇಲಾಖೆಯ ನಿರ್ದೇಶಕರು ರಾಮಮೂರ್ತಿಗೆ ನೋಟಿಸ್ ಜಾರಿಗೊಳಿಸಿದ್ದು, ಹೆಚ್ಚಿನ ವಿವರವಿರುವ ದಾಖಲೆಗಳಿದ್ದಲ್ಲಿ ಕಚೇರಿಗೆ ನೀಡುವಂತೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಆದಾಯ ತೆರಿಗೆ ಇಲಾಖೆ ಐಟಿ ದಾಳಿ ಕಾಂಗ್ರೆಸ್ Congress It Raid Cm Siddaramaiah Income Tax Investigation

ಸುದ್ದಿಗಳು

news

ಒಂದೇ ದಿನ, ಒಂದೇ ವಿವಾಹ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾಗಲು ಯತ್ನಿಸಿದ ಭೂಪ

ಮಧುರೈ: ಒಂದೇ ದಿನ, ಒಂದೇ ವಿವಾಹ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾಗಲು ಬಯಸಿ ಸಂಬಂಧಿಕರನ್ನು ...

news

ಇಂದಿರಾಗಾಂಧಿ ನಂತ್ರ ರಕ್ಷಣಾ ಸಚಿವೆಯಾದ 2ನೇ ಮಹಿಳೆ ನಿರ್ಮಲಾ ಸೀತಾರಾಮನ್

ನವದೆಹಲಿ: ಇಂದಿರಾಗಾಂಧಿ ನಂತ್ರ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾದ 2ನೇ ಮಹಿಳೆ ಎನ್ನುವ ಗೌರವಕ್ಕೆ ...

news

ರಾಜ್ಯದ ಮತ್ತೊಬ್ಬ ಸ್ವಾಮಿಜಿಯ ಅನೈತಿಕ ಸಂಬಂಧ ಬಯಲು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ಮಾದುಲಿಂಗ ಸ್ವಾಮೀಜಿ ಅನೈತಿಕ ಸಂಬಂಧ ...

news

ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ

ನವದೆಹಲಿ: ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಕೇಂದ್ರದ ರಾಜ್ಯ ಸಚಿವ ಸ್ಥಾನ ದೊರೆತಿದೆ.

Widgets Magazine