ಮೋದಿದು ಮನ್ ಕೀ ಬಾತ್, ನಮ್ದು ಕಾಮ್ ಕೀ ಬಾತ್: ಸಿಎಂ ವಾಗ್ದಾಳಿ

ಬೆಂಗಳೂರು:, ಶನಿವಾರ, 23 ಸೆಪ್ಟಂಬರ್ 2017 (13:58 IST)

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಮ್ಮದು ಕಾಮ್ ಕೀ ಬಾತ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೇಳಿಕೊಳ್ಳೋಕೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳುತ್ತಾರೆ. ಆದರೆ, ನಿಜವಾಗಿ  ಬಂಡವಾಳಶಾಹಿಗಳಿಗೆ ಮಾತ್ರ ಸಾಥ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
 
ನಿಜವಾದ ಅರ್ಥದಲ್ಲಿ ಎಲ್ಲರಿಗೂ ಸಾಥ್ ನೀಡಿದವರು ನಾವು. ರಾಜ್ಯದಲ್ಲಿ ಎಲ್ರಿಗೂ ಒಂದಾದ್ರೂ ಕಾರ್ಯಕ್ರಮ ನಾವು ನೀಡಿದ್ದೇವೆ. ಮೋದಿ ಸರಕಾರ ಏನು ಮಾಡಿದೆ ಎಂದು ಗುಡುಗಿದರು. 
 
ಕಳೆದ ವರ್ಷ ನೋಟ್ ಬ್ಯಾನ್ ಜಾರಿಗೊಳಿಸಿ ದೇಶದ ಆರ್ಥಿಕತೆಯನ್ನು ಅಲ್ಲೋಲ ಕಲ್ಲೋಲ ಮಾಡಿದರು. ಇವತ್ತು ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದು ಮೋದಿ ಸರಕಾರದ ಕೊಡುಗೆ ಎಂದು ವ್ಯಂಗ್ಯವಾಡಿದರು.
 
ರಾಜ್ಯದಲ್ಲಿ ರೈತರ ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಮೋದಿ ಸರಕಾರ ಹಿಂದೇಟು ಹಾಕುತ್ತಿದೆ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದ ಸರಕಾರಕ್ಕೆ ರೈತರ ಸಾಲ ಹೊರೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೋಟು ನಿಷೇಧದಿಂದ ದೇಶದ ಆರ್ಥಿಕತೆ ಕುಸಿತದತ್ತ : ಮನಮೋಹನ್ ಸಿಂಗ್

ಮೊಹಾಲಿ(ಪಂಜಾಬ್): ಕಳೆದ ವರ್ಷ ಪ್ರಧಾನಿ ಮೋದಿ ಜಾರಿಗೊಳಿಸಲಾದ ನೋಟು ನಿಷೇಧ ಸಾಹಸದಿಂದಾಗಿ ದೇಶದ ಆರ್ಥಿಕತೆ ...

news

ಬಿಎಸ್‌ವೈಗೆ ನೋಟಿಸ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು: ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ಅಪಹರಣ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ...

news

ಹೆಚ್.ಡಿ.ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರು: ಬನ್ನೇರಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ...

ಗಂಗಾ ಸಂರಕ್ಷಣಾ ಪ್ರತಿಜ್ಞೆ ತೆಗೆದುಕೊಳ್ಳಲಿರುವ ರಾಷ್ಟ್ರಪತಿ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ್ ರಾಜ್ಯ ಪ್ರವಾಸ ...

Widgets Magazine
Widgets Magazine