ತನ್ನ ವಿರುದ್ಧ ಹೇಳಿಕೆ ನೀಡಿದ ಎಸ್‍ಎಂ ಕೃಷ್ಣ ಮತ್ತು ಸುಮಲತಾಗೆ ಟ್ವೀಟರ್ ನಲ್ಲಿ ತಿರುಗೇಟು ನೀಡಿದ ಸಿಎಂ

ಬೆಂಗಳೂರು, ಶನಿವಾರ, 16 ಮಾರ್ಚ್ 2019 (08:24 IST)

ಬೆಂಗಳೂರು : ತನ್ನ ವಿರುದ್ಧ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಮತ್ತು ಸುಮಲತಾ ಅವರಿಗೆ ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.


 ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ವಿರುದ್ಧ ಕಿಡಿಕಾರಿದ ಸಿಎಂ ಅವರು,’ 50 ವರ್ಷ ಕಾಲ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ. ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ. ಇಷ್ಟೆಲ್ಲ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ’.


‘ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ ಬಹಳ ಸಂತೋಷ. ಆದರೆ ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದದ್ದು ನೆನಪಿದೆ ಎಂದು ಭಾವಿಸುತ್ತೇನೆ’ ಎಂದು ಟ್ವೀಟ್ ಮಾಡಿ  ತಿರುಗೇಟು ನೀಡಿದ್ದಾರೆ.


ಹಾಗೇ ಸುಮಲತಾ ಅವರ ಕುರಿತು ಟ್ವೀಟ್ ಮಾಡಿದ ಅವರು,’ ನಿಮ್ಮ ರೈತಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ ಈಗ ದಿಢೀರನೆ ಪ್ರತ್ಯಕ್ಷರಾಗಿ ಪ್ರತೀ ದಿನ ಹೊಲ ಗದ್ದೆಗಳಲ್ಲಿ ದುಡಿದು, ಉತ್ತು ಬಿತ್ತಿದ ಅನುಭವ ಹಂಚಿಕೊಳ್ಳುತ್ತಿದ್ದೀರಿ. ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ಕೇಳಲು ನಾವು ಕಾತರರಾಗಿದ್ದೇವೆ’ ಎಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

60 ವರ್ಷಗಳಲ್ಲಿ ದೇವೇಗೌಡ್ರಿಗೆ ಕಾರ್ತಕರ್ತರೇ ಸಿಗಲಿಲ್ವಾ ಎಂದು ಕಾಲೆಳೆದ ಮುಖಂಡ

ಹೆಚ್.ಡಿ.ದೇವೆಗೌಡರು ಮೂರನೇ ತಲೆಮಾರಿಗೆ ರಾಜಕೀಯ ಪ್ರವೇಶ ಮಾಡಿಸಿದ್ದಾರೆ. ನಿಮ್ಮ ಮೊಮ್ಮಗನೇ ...

news

ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ ಎಂದ ಸಚಿವ

ಉಮೇಶ್ ಜಾಧವ್ ಪಕ್ಷ ಬಿಟ್ಟಿರೋದ್ರಲ್ಲಿ ನಾನು ಆರೋಪಿ ನಂಬರ್ ಒನ್ ಆಗಿದ್ದೇನೆ. ಹೀಗಂತ ಸಚಿವರೊಬ್ಬರು ...

news

ನಿಖಿಲ್ ಕೈ ಹಿಡಿದು ದೀಪ ಬೆಳಗಿ ಸಾರಿದ್ರು ಒಗ್ಗಟ್ಟಿನ ಸಂದೇಶ

ಚುನಾವಣೆ ಕಣದಲ್ಲಿ ಇದೀಗ ಒಗ್ಗಟ್ಟಿನ ಮಂತ್ರ ಸಾರಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.

news

ಯುವತಿಯರಲ್ಲಿ ಉದ್ರೇಕ ಬರಿಸಲು ಇಲ್ಲಿ ಟಚ್ ಮಾಡಿ

ಲೈಂಗಿಕ ಕ್ರಿಯೆಗೂ ಮುನ್ನ ಫೋರ್ ಪ್ಲೇ ಮಾಡೋವಾಗ ಮಹಿಳೆಯರ ಕೆಲವೊಂದು ಅಂಗಗಳು ಸೂಕ್ಷ್ಮ ಸಂವೇದನೆಯನ್ನು ...

Widgets Magazine