ಅವರಪ್ಪನಿಂದಲೂ ನನ್ನ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ ಕಾಂಗ್ರೆಸ್ ಶಾಸಕ

ದಾವಣಗೆರೆ, ಶನಿವಾರ, 15 ಸೆಪ್ಟಂಬರ್ 2018 (17:54 IST)

ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿರುವ ಯತ್ನಕ್ಕೆ ಕಾಂಗ್ರೆಸ್ ಶಾಸಕ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್  ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದು, ಬಿಜೆಪಿ ಅವರೇನಾದರೂ ನಮ್ಮವರಿಗೆ ಕೈ ಹಾಕಿದರೆ ನಾವು ಅವರ ಗುಂಪಿಗೆ ಕೈ ಹಾಕುವ ಮೂಲಕ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನಾನು ಬಿಜೆಪಿ ಸೇರುತ್ತೇನೆ ಎಂಬುದೆಲ್ಲ ಸುಳ್ಳು. ನನ್ನನ್ನು ಸಂಪರ್ಕಿಸಲು ಅವರಪ್ಪನಿಂದಲೂ ಸಾಧ್ಯವಿಲ್ಲ ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಕ್ರಿಯೆ ನೀಡಿರುವ ಶಾಮನೂರು ಶಿವಶಂಕರಪ್ಪ, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹೀಗಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಶಿವಶಂಕರಪ್ಪ, ಜಾರಕಿಹೊಳಿ ಸೇರಿದಂತೆ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಶಾಸಕರೇ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ನಾನು ಮಂತ್ರಿ ಸ್ಥಾನದ ಮೇಲೆ ಡಿಫೆಂಡ್ ಆಗಿಲ್ಲ.

ನಮ್ಮ ಕೈಯಲ್ಲಿರುವ ಕೆಲಸಗಳನ್ನು ಮಾಡುತ್ತೇವೆ. ಮಂತ್ರಿ ಸ್ಥಾನ ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ ಎಂದು ಹೇಳಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಸ್ ಪ್ರಯಾಣ ದರ ಏರಿಕೆ ಶೀಘ್ರ

ರಾಜ್ಯ ರಸ್ತೆ ಸಾರಿಗೆ ಇಲಾಖೆ ಐದಾರು ನೂರು ಕೋಟಿ ರೂ.ಗಳ ನಷ್ಟದಲ್ಲಿದೆ. ಹೀಗಾಗಿ ಬಸ್ ಪ್ರಯಾಣ ದರವನ್ನು ...

news

ಸಿದ್ದರಾಮಯ್ಯ ಬಂದ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರ?

ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಕ್ಕೆ ಮರಳಿ ಬಂದ ಮೇಲೆ ರಾಜ್ಯದ ಸಮ್ಮಿಶ್ರ ...

news

ಚೀನಾದ ಈ ಹೋಟೆಲ್ ಅನ್ನು ಮುಚ್ಚುವ ಪರಿಸ್ಥಿತಿ ಬಂದಿದ್ದಾರೂ ಯಾಕೆ ಗೊತ್ತೇ?

ಬೀಜಿಂಗ್‌: ಗರ್ಭಿಣಿ ಹಾಗೂ ಅವಳ ಗಂಡ ರಾತ್ರಿ ಊಟಕ್ಕಾಗಿ ಚೀನಾದ ಹೋಟೆಲ್ ವೊಂದಕ್ಕೆ ಹೋಗಿದ್ದರು. ಮಹಿಳೆ ...

news

ಸಚಿವ ಜಾರಕಿಹೊಳಿ ಕೆನ್ನೆ ಹಿಡಿದ ಸಿಎಂ!

ಜಾರಕಿಹೊಳಿ ಬ್ರದರ್ಸ್​ ಸಮ್ಮಿಶ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದು, ಹಲವು ರಾಜಕೀಯ ಬೆಳವಣಿಗೆಗೆ ...

Widgets Magazine