ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಗುರುವಾರ, 1 ಮಾರ್ಚ್ 2018 (17:14 IST)

Widgets Magazine

ಲೋಕಪಾಲ ಆಯ್ಕೆ ಸಮಿತಿ ಸಭೆಗೆ ಹಾಜರಾಗುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ನೀಡಲಾಗಿದ್ದ ಆಹ್ವಾನವನ್ನು ಅವರು ತಿರಸ್ಕರಿಸಿದ್ದಾರೆ.
ಈ ಸಭೆಗೆ ವಿಶೇಷ ಆಹ್ವಾನಿತರಾಗಿ ಬರುವಂತೆ ಪ್ರಧಾನಿ ಮೋದಿ ಆಹ್ವಾನವಿತ್ತಿದ್ದರು. ಆದರೆ ಖರ್ಗೆ ಸಭೆಗೆ ಹಾಜರಾಗದೇ ಇರಲು ತೀರ್ಮಾನಿಸಿದ್ದಾರೆ. ಸಭೆಯಲ್ಲಿ ಮೋದಿ ಜತೆಗೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಆಗಮಿಸಲಿದ್ದಾರೆ.
 
ಆದರೆ ಸಭೆಯಲ್ಲಿ ತಮಗೆ ವಿಶೇಷ ಆಹ್ವಾನಿತನ ಸ್ಥಾನ ನೀಡಲಾಗಿದೆಯಷ್ಟೆ. ಹೀಗಾಗಿ ಡಮ್ಮಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅದನ್ನು ವಿರೋಧಿಸುವ ಅಧಿಕಾರವಿರುವುದಿಲ್ಲ ಎಂದು ಸಭೆಯಲ್ಲಿ ಭಾಗವಹಿಸದೇ ಇರಲು ಖರ್ಗೆ ತೀರ್ಮಾನಿಸಿದ್ದಾರೆ.
 
 
ಬಿಜೆಪಿ ಪಾದಯಾತ್ರೆಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ
 
ಬೆಂಗಳೂರು ರಕ್ಷಿಸಿ ಎಂದು ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ಟ್ಟಿದ್ದಾರೆ.
 
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬೆಂಗಳೂರನ್ನು ಮುಳುಗಿಸಿದವರೇ ಬಿಜೆಪಿಯವರು. ಬೆಂಗಳೂರನ್ನು ಬಿಜೆಪಿ ಗೂಂಡಾಗಳಿಂದ ರಕ್ಷಿಸಬೇಕಷ್ಟೇ. ಯಾವ ಪಾದಯಾತ್ರೆ ಮಾಡಿದ್ರೆ ಏನು ಪ್ರಯೋಜನ? ಎಂದು ಟಾಂಗ್ ಕೊಟ್ಟಿದ್ದಾರೆ.
 
ಅತ್ತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಕೂಡಾ ಇದೇ ವಿಚಾರಕ್ಕೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಲ್ಲಿ ಗೂಂಡಾಗಿರಿ ನಡೆಸುತ್ತಿರುವವರೇ ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮಾಧ್ಯಮದವರ ಮೇಲೆ ಸಿಎಂ ಬೆಂಗಾವಲು ಪಡೆಯಿಂದ ದಬ್ಬಾಳಿಕೆ!
 
ಸಿಎಂ ಬೆಂಗಾವಲು ಪಡೆಯವರು ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸಿದ ಕುರಿತು ವರದಿಯಾಗಿದೆ. ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ. 
 
ಸಿಎಂ ಬೆಂಗಾವಲು ಪಡೆಯವರು ಕ್ಯಾಮೆರಾ ಮೆನ್ ಗಳಿಗೆ ವಿಡಿಯೋ ಮಾಡದಂತೆ ತಡೆಯನ್ನುಂಟು ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಸಿಎಂ ಬೆಂಗಾವಲು ಪಡೆಯವರು ಅಡ್ಡಿಪಡಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆಗೈದ ತಂದೆ!

ಜಾರ್ಖಂಡ್:ಮಗನೊಬ್ಬ ತಾಯಿಯೊಂದಿಗೆ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ತಂದೆಯೇ ತನ್ನ ...

news

ಟಿಕೆಟ್ ಕೈತಪ್ಪುವ ಆತಂಕ; ಸಿದ್ದರಾಮಯ್ಯ ಎದುರು ಬಲ ಪ್ರದರ್ಶನ ತೋರಿಸಿದ ಹ್ಯಾರಿಸ್

ಬೆಂಗಳೂರು: ಮಹಮದ್‌ ನಲಪಾಡ್‌ ಹಲ್ಲೆ ಪ್ರಕರಣದಿಂದ ಟಿಕೆಟ್ ಕೈ ತಪ್ಪಿ ಹೋಗಲಿದೆ ಎಂಬ ಅನುಮಾನ ಇರುವ ...

news

ಮಾಧ್ಯಮದವರ ಮೇಲೆ ಸಿಎಂ ಬೆಂಗಾವಲು ಪಡೆಯಿಂದ ದಬ್ಬಾಳಿಕೆ!

ಬೆಂಗಳೂರು: ಸಿಎಂ ಬೆಂಗಾವಲು ಪಡೆಯವರು ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸಿದ ಕುರಿತು ವರದಿಯಾಗಿದೆ. ...

news

ಬಾತ್ ರೂಂ ನಲ್ಲಿ ಕ್ಯಾಮೆರಾ ಫಿಕ್ಸ್; ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡುವ ಚಪಲ ಚನ್ನಿಗರಾಯ ಈಗ ಪೊಲೀಸ್ ಅತಿಥಿ!

ಬೆಂಗಳೂರು: ಬಿಳೆಕಳ್ಳಿಯಲ್ಲಿ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ ಕಾಮುಕನೊಬ್ಬ ಈಗ ಪೊಲೀಸರ ...

Widgets Magazine