ಆಕರ್ಷಕ ಪಂಜಿನ ಕವಾಯತು ಮೂಲಕ ದಸರಾ 2017ಕ್ಕೆ ಅದ್ಧೂರಿ ತೆರೆ

ಮೈಸೂರು, ಭಾನುವಾರ, 1 ಅಕ್ಟೋಬರ್ 2017 (09:54 IST)

ಮೈಸೂರು: ದಸರಾ ಮಹೋತ್ಸವದ ಕೊನೆಯ ದಿನವಾದ ನಿನ್ನೆ ಆಕರ್ಷಕ ಪಂಜಿನಕವಾಯತು ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.


ಮೌಂಟೆಡ್ ಪೊಲೀಸ್ ಕಂಪನಿಯ ಪ್ರಧಾನ ದಳಪತಿ ಶಿವರಾಜ್ ನೇತೃತ್ವದಲ್ಲಿ ಅಶ್ವಪಡೆಯು ರಾಜ್ಯಪಾಲ ವಜೂಭಾಯಿ ರುಢಾಬಾಯಿ ವಾಲಾರಿಗೆ 21 ಕುಶಾಲತೋಪುಗಳ ರಾಷ್ಟ್ರ ಗೌರವ ಸಮರ್ಪಿಸಿತು. ಈ ಸಂದರ್ಭದಲ್ಲಿ  ಗ್ಯಾಲಪರ್ ಆಗಿ ರುದ್ದಪ್ಪ, ಸುಲ್ತಾನ್ ಹೆಸರಿನ ಕುದುರೆಯೊಂದಿಗೆ ಪ್ರದರ್ಶನದಲ್ಲಿ ಭಾಗಿಯಾದರು. ನಗರ‌ಪೊಲೀಸ್ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್ ರಾಜ್ಯಪಾಲರಿಗೆ ಬೆಂಗಾವಲಿನಲ್ಲಿದ್ದರು.

ಶತಮಾನಗಳ ಇತಿಹಾಸವಿರುವ ಪಂಜಿನ ಕವಾಯತು ಅಥವಾ ದೀವಟಿಗೆ‌ ಸಲಾಂನಲ್ಲಿ ಸೈನಿಕರ ಪಂಜಿನ ಪ್ರದರ್ಶನ ರೋಮಾಂಚನಗೊಳಿಸಿತು. 1600 ಇಸವಿಯಿಂದಲೂ ದೀವಟಿಗೆ ಸಲಾಂ ವಿಜಯದಶಮಿ ಮೆರವಣಿಗೆ ನಂತರ ನಡೆಯುತ್ತದೆ.

ಕರ್ನಾಟಕ‌‌ ಪೊಲೀಸ್‌ ಪಡೆಯ ಶಿಸ್ತು ಬದ್ಧ ಪಥಸಂಚಲನ ನೋಡುಗರಿಗೆ ಚಕಿತಗೊಳಿಸುತ್ತೆ. ಬೆಂಗಳೂರಿನ ಭೂದಳದ 30 ಮಂದಿ ಯೋಧರು ಜಗತ್ತಿನಾದ್ಯಂತ ಟರ್ನಾಡೊ ಎಂದು ತಮ್ಮ ಮಿಂಚಿನ ವೇಗದ ರಾಯಲ್ ಎನ್ಫೀಲ್ಡ್ ಬೈಕ್ ಗಳ ಸಾಹಸ ಪ್ರದರ್ಶನ ಮಾಡುತ್ತಾರೆ. ಈ ತಂಡ ಮೈದಾನದಲ್ಲಿ ತರಾವರಿ  ಕಸರತ್ತು ಪ್ರದರ್ಶಿಸುವ ಮೂಲಕ ಮೈನವಿರೇಳಿಸುವಂತೆ ಮಾಡಿದರು.

ಏಳು ಬೈಕ್ ಗಳ ಮೇಲೆ‌ 30 ಜನ ಯೋಧರು ರಾಷ್ಟ್ರಧ್ವಜ ಹಿಡಿದು ಸಾಗಿದ್ದು ಜನರ  ಪ್ರಶಂಸೆಗೆ ಪಾತ್ರವಾಯಿತು. ಈ ತಂಡವನ್ನು ರಿಷಬ್ ಘಟಗ್ ಮುನ್ನಡೆಸಿದರು. ಸಾಹಸ ಪ್ರದರ್ಶನಗಳ ಜೊತೆಗೆ ಮೈಸೂರಿನ ಶ್ರೀಧರ್ ಜೈನ್ ನೇತೃತ್ವದಲ್ಲಿ 325 ಕಲಾವಿದರು ನೃತ್ಯರೂಪಕ ಪಸ್ತುತ ಪಡಿಸಿದರು.

ರಂಗಕಲಾವಿದ‌ ಜನಾರ್ಧನ್‌ ನಿರ್ದೆಶನದಲ್ಲಿ ಚಿಂತನ್ ವಿಕಾಸ್ ಸಂಗೀತ ನಿರ್ದೆಶನ, ರಾಜಪ್ಪ‌ ದಳವಾಯಿ ಸಾಹಿತ್ಯದಲ್ಲಿ ಮೂಡಿಬಂದ ಜೀವಜಲ‌ ಹಾಗೂ‌ ಪ್ರಕೃತಿ ರಕ್ಷಣೆಯ ಪ್ರಸ್ತುತಿ, ಜನಪದ ಕಲಾತಂಡಗಳ ಮೇಳ ನೀರಿನ ಮಹತ್ವ ಸಾರಿದರು.

ಅಶ್ವರೋಹಿ ಪಡೆಯ ಸುದರ್ಶನ್ ಹಾಗೂ ಅವರ‌ ತಂಡ ಇಕ್ವಸ್ಟೀರಿಯನ್ ಸ್ಪೋರ್ಟ್ಸ್ ಅಶ್ವಗಳು ಶರವೇಗದಲ್ಲಿ ಬಂದು ಟೆಂಟ್ ಪೆಗ್ಗಿಂಗ್ ಮಾಡುವ ಮೂಲಕ  ಸಾಹಸ ಪ್ರದರ್ಶಿಸಿದರು. ಪಂಜಿನ ಕವಾಯತು ಪ್ರದರ್ಶನವನ್ನು ಚಿತ್ರದುರ್ಗದ ಐಮಂಗಲದ 302 ಪೊಲೀಸ್ ಪ್ರಶಿಕ್ಷಣಾರ್ತಿಗಳು ಪ್ರದರ್ಶನ ನೀಡಿದರು. ಕವಾಯತಿನಲ್ಲಿ ಮೈಸೂರು ದಸರಾ, ಕರ್ನಾಟಕ ಪೊಲೀಸ್, ಹ್ಯಾಪಿ ದಸರಾ, ವೆಲ್ಕಮ್ ಟು ಆಲ್ ಹಾಗೂ ಕೊನೆಯಲ್ಲಿ ಜೈ ಚಾಮುಂಡಿ, ಜೈ ಹಿಂದ್ ಹಾಗೂ ಸೀ ಯೂ ಇನ್ 2018 ರೂಪಿಸುವ ಮೂಲಕ ದಸರಾಗೆ ಅದ್ಧೂರಿ ತೆರೆಬಿದ್ದಿತು.

ಸಿಎಂ ಸಿದ್ದರಾಮಯ್ಯ, ಈ ಬಾರಿಯ ದಸರಾ ಉದ್ಘಾಟಕರಾದ ಕವಿ ಕೆ.ಎಸ್.ನಿಸಾರ್ ಅಹಮದ್, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಬಿ.ರಮಾನಾಥ ರೈ, ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಶಿಕ್ಷಣ ಸಚಿವ ತನ್ವೀರ್ ಸೇಠ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  
ಪಂಜಿನ ಕವಾಯತು ಅಶ್ವರೋಹಿ ದಳ ದಸರಾ ಬನ್ನಿ ಮಂಟಪ Dasara Banni Mantap Tourch Light Perade

ಸುದ್ದಿಗಳು

news

ಪಾಕ್ ನಿಂದ ಭಾರತಕ್ಕೆ ರಹಸ್ಯ ಸುರಂಗ ಮಾರ್ಗ!

ನವದೆಹಲಿ: ಪಾಕಿಸ್ತಾನದಿಂದ ಭಾರತದ ಕಡೆಗೆ 14 ಅಡಿ ಉದ್ದದ ರಹಸ್ಯ ಸುರಂಗ ಮಾರ್ಗವೊಂದನ್ನು ಭಾರತದ ಗಡಿ ...

news

ವಿವಾಹಿತ ಮಹಿಳೆಯನ್ನು ಒತ್ತೆಯಾಳಾಗಿರಿಸಿ 10 ದಿನ ರೇಪ್ ಎಸಗಿದ ಮಾಜಿ ಫ್ರೆಂಡ್

ಮೌಂಟಬು: ಮಾಜಿ ಗೆಳೆಯನೊಬ್ಬ ವಿವಾಹಿತ ಮಹಿಳೆಯನ್ನು 10 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ...

news

ನಿಮ್ಮ ಮುಖವೇ ಆಗಲಿದೆ ಫೇಸ್ ಬುಕ್ ಐಡಿ ಪಾಸ್ ವರ್ಡ್...!

ಕ್ಯಾಲಿಫೋರ್ನಿಯಾ: ಈಗ ಕೂತಲ್ಲಿ ನಿಂತಲ್ಲಿ, ಎಲ್ಲೇ ಇದ್ದರೂ ಫೇಸ್ ಬುಕ್ ಆನ್ ಇದ್ದೇ ಇರುತ್ತೆ. ಫೇಸ್ ಬುಕ್ ...

news

ಬಾಲೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ತುಟಿಗಳನ್ನು ತಿಂದ ಕಾಮುಕ

ಪಾಣಿಪತ್: ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ, 4 ವರ್ಷ ವಯಸ್ಸಿನ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ ...

Widgets Magazine