ಉಡುಪಿಯಲ್ಲಿ ಇಂದಿನಿಂದ ಧರ್ಮಸಂಸದ್ ಆರಂಭ

ಉಡುಪಿ, ಶುಕ್ರವಾರ, 24 ನವೆಂಬರ್ 2017 (07:09 IST)

ಉಡುಪಿ: ಧರ್ಮ ಸಂಸದ್ ಗೆ ಈಗಾಗಲೇ  ಸಾಕಷ್ಟು ತಯಾರಿ ಮಾಡಿಕೊಂಡಿರುವ ಕೃಷ್ಣನ ಬೀಡಾದ ಉಡುಪಿಯಲ್ಲಿ ಇಂದಿನಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ.


ಈಗಾಗಲೇ ಸಾಧುಸಂತರು, ಧಾರ್ಮಿಕ ಮುಖಂಡರು ಉಡುಪಿಗೆ ಆಗಮಿಸಿದ್ದಾರೆ. ಬೆಳಿಗ್ಗೆ 9ಕ್ಕೆ ಸಾಧುಸಂತರ ಸಮ್ಮಿಲನ, ಭಾಗವತ್  ದಿಕ್ಸೂಚಿ ಭಾಷಣವಿದೆ. ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಿಗ್ಗೆ 9ಗಂಟೆಗೆ ಸಾಧುಸಂತರ ಸಮ್ಮಿಲನವಾಗಲಿದೆ. ನಂತರ ಕಲ್ಸಂಕ ರೋಯಲ್ ಗಾರ್ಡನ್ ನಲ್ಲಿರುವ ಧರ್ಮ ಸಂಸದ್ ಸಭೆಗೆ ಭವ್ಯ ಮೆರವಣಿಗೆಯ ಮೂಲಕ ಸಾವಿರಾರು ಸಂತರು ಆಗಮಿಸಲಿದ್ದಾರೆ.


ತದನಂತರ ಧರ್ಮಸಂಸದ್ ಉದ್ಘಾಟನಾ ಸಭೆ, ವಿವಿಧ ಆಶೀರ್ವಚನ, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಂದ ದಿಕ್ಸೂಚಿ ಭಾಷಣವಿದೆ. ಮಧ್ಯಾಹ್ನ 3.30ಕ್ಕೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮುಂದಿನ ನಡೆ, ಗೋರಕ್ಷಣೆ, ಗೋಸಂವರ್ಧನೆಗೆ ಯೋಜನೆಗಳ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಬೆಳಿಗ್ಗೆಯಿಂದ ರಾತ್ರಿಯ ತನಕ ಹಿಂದೂ ವೈಭವ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಪ್ರವೇಶವಿದೆ. ರಾತ್ರಿ 8.15ರಿಂದ ಆಳ್ವಾಸ್ ನುಡಿಸಿರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :  
ಉಡುಪಿ ಧರ್ಮಸಂಸದ್ ಇಂದನಿಂದ ಆರಂಭ Udupi Dharmasamsadh Today Start

ಸುದ್ದಿಗಳು

news

ಮತ್ತೊಂದು ರೈಲು ದುರಂತ

ಉತ್ತರ ಪ್ರದೇಶ: ಕಳೆದ ಬಾರಿ ನಡೆದ ದುರಂತದ ನೋವಿನ್ನೂ ಮಾಸಿಲ್ಲ. ಈಗ ಉತ್ತರ ಪ್ರದೇಶ: ಕಳೆದ ಬಾರಿ ನಡೆದ ...

news

ಎಚ್.ಪಿ. ಲೋಯಾ ಸಾವಿನ ಪ್ರಕರಣ; ಉನ್ನತ ಮಟ್ಟದ ತನಿಖೆಗಾಗಿ ಪಟ್ಟು ಹಿಡಿದ ಸಿಪಿಎಂ

ನವದೆಹಲಿ: ಸೊಹ್ರಾಬುದ್ದೀನ್ ಶೇಖ್ ಅವರ ಎನ್ ಕೌಂಟರ್ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವಾಗಲೇ ಸಿಬಿಐ ...

news

ಇಪಿಎಸ್-ಓಪಿಎಸ್ ಬಣಗಳಿಗೆ ಎರೆಡೆಲೆ ಚಿಹ್ನೆ: ಟಿಟಿಬಿ ದಿನಕರನ್‌ಗೆ ಮುಖಭಂಗ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ ...

news

ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನು 8 ತುಂಡುಗಳಾಗಿ ಕತ್ತರಿಸಿದ್ದ ಪತ್ನಿಗೆ 30 ವರ್ಷ ಜೈಲು

ಝಾಜ್ಜರ್(ಹರಿಯಾಣಾ): ಕಳೆದ 2016ರಲ್ಲಿ ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಎಂಟು ತುಂಡುಗಳಾಗಿ ...

Widgets Magazine