ಧರ್ಮಸಿಂಗ್ ಅಂತ್ಯಸಂಸ್ಕಾರ: ಜೇವರ್ಗಿಯಲ್ಲಿ ಭಾರಿ ಪ್ರತಿಭಟನೆ

ಜೇವರ್ಗಿ, ಗುರುವಾರ, 27 ಜುಲೈ 2017 (18:18 IST)

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಂತ್ಯಸಂಸ್ಕಾರವನ್ನು ಕಲಬುರಗಿಯ ನಾಗನಹಳ್ಳಿಯಲ್ಲಿ ನೆರವೇರಿಸಲು ಸಿದ್ದತೆ ನಡೆಯುತ್ತಿರುವಂತೆ, ನೆಲೋಗಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗ್ರಾಮದಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ.
 
ಪ್ರತಿಭಟನಾಕಾರರು ರಾಜ್ಯ ಹೆದ್ದಾರಿಯನ್ನು ಟೈರ್‌ಗಳಿಗೆ ಬೆಂಕಿ ಹಚ್ಚಿ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಧರ್ಮಸಿಂಗ್ ಅವರ ಹುಟ್ಟೂರಾಗಿದ್ದರಿಂದ ಅದೇ ಗ್ರಾಮದಲ್ಲಿಯೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್ ಇಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೀದರ್‌ಗೆ ತಂದು ನಂತರ ಕಲಬುರಗಿಗೆ ತರಲಾಗುತ್ತಿದೆ.
 
ನಗರದ ಆರ್ಯನ್ ಶಾಲೆಯ ಬಳಿ ಧರ್ಮಸಿಂಗ್ ಅವರ ಅಂತ್ಯಸಂಸ್ಕಾರಕ್ಕೆ ಮುಂದಾಗಿರುವುದು ಜೇವರ್ಗಿ ತಾಲೂಕಿನ ನಾಗರಿಕರಿಗೆ ಆಕ್ರೋಶ ಮೂಡಿಸಿದೆ.
 
ಜೇವರ್ಗಿ ನಾಗರಿಕರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಧರ್ಮಸಿಂಗ್ ಹುಟ್ಟೂರು ನೆಲೋಗಿಯಲ್ಲಿ ಅಂತ್ಯಸಂಸ್ಕಾರದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಧರ್ಮಸಿಂಗ್ ಜೇವರ್ಗಿ ಕಾಂಗ್ರೆಸ್ ನೆಲೋಗಿ ಗ್ರಾಮಸ್ಥರ ಪ್ರತಿಭಟನೆ Dharmsingh Jewargi Congress Nelogi Protest

ಸುದ್ದಿಗಳು

news

ಅವಕಾಶವಾದಿ ನಿತೀಶ್ ಕುಮಾರ್ ನಮ್ಮನ್ನು ವಂಚಿಸಿದ್ರು: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಾಮೈತ್ರಿಕೂಟ ತೊರೆದು ಎನ್‌ಡಿಎ ತೆಕ್ಕೆಗೆ ಸೇರ್ಪಡೆಯಾದ ...

news

ಇದೆಂಥ ಹೀನ ಕೃತ್ಯ..ಪಂಚಾಯ್ತಿ ಆದೇಶವೆಂದು ಕುಟುಂಬಸ್ಥರ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಗ್ರಾಮ ಪಂಚಾಯಿತಿ ಸದಸ್ಯರ ಆದೇಶ ಹಿನ್ನಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರ ಎದುರೇ ...

news

ಮದುವೆಯಾಗುವುದನ್ನು ತಪ್ಪಿಸಲು ಪ್ರಿಯತಮೆಯ ಮೇಲೆ ಗೆಳೆಯರಿಂದ ರೇಪ್ ಮಾಡಿಸಿದ ಪ್ರಿಯಕರ

ಜಲಂಧರ್: ಪ್ರಿಯತಮೆಯೊಂದಿಗೆ ಮದುವೆಯಾಗುವುದನ್ನು ತಪ್ಪಿಸಲು ಪಿತೂರಿ ನಡೆಸಿದ ಆರೋಪದ ಮೇಲೆ ಕಾಲೇಜು ...

news

ಬಿಜೆಪಿಗೆ ನಿತೀಶ್ ಬೆಂಬಲ: ಇಬ್ಬಾಗವಾಗುವತ್ತ ಜೆಡಿಯು ಪಕ್ಷ

ಪಾಟ್ನಾ: ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಯಿಂದ ...

Widgets Magazine