ಡಿಐಜಿ ರೂಪಾಗೆ ಈಗ ನೂರಾನೆಯ ಬಲ ಬಂದಿದೆಯಂತೆ! ಕಾರಣವೇನು ಗೊತ್ತಾ?

Bangalore, ಶನಿವಾರ, 15 ಜುಲೈ 2017 (11:35 IST)

Widgets Magazine

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಡಿಜಿಪಿ ಸತ್ಯನಾರಾಯಣ ವಿರುದ್ಧವೇ ತಿರುಗಿ ಬಿದ್ದ ಡಿಐಜಿ ರೂಪಾ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಷ್ಟೆಲ್ಲಾ ಸತ್ಯ ಹೊರಹಾಕಲು ಡಿಐಜಿ ರೂಪಾಗೆ ಈಗ ಮತ್ತಷ್ಟು ಬಲ ಬಂದಿದೆ.


 
ಅದಕ್ಕೆ ಕಾರಣ ದೇಶ ಕಂಡ ಇನ್ನೊಬ್ಬ ಅಪ್ರತಿಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಟ್ವಿಟರ್ ನಲ್ಲಿ ರೂಪಾ ಕ್ರಮಕ್ಕೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಟ್ವಿಟರ್ ಮೂಲಕ ಸಂದೇಶ ಬರೆದಿರುವ ಪುದುಚೇರಿ ಲೆಫ್ಟಿನೆಂಟ್ ಗ ಗವರ್ನರ್ ‘ಇಂತಹ ಇನ್ನಷ್ಟು ಐಪಿಎಸ್ ಅಧಿಕಾರಿಗಳು ನಮಗೆ ಬೇಕು’ ಎಂದು ಹೊಗಳಿದ್ದಾರೆ.
 
ಅಷ್ಟೇ ಅಲ್ಲ ಈ ಸಂದೇಶಕ್ಕೆ ಪ್ರಧಾನಿ ಮೋದಿ ಮತ್ತು ಅವರ ಕಚೇರಿಯ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಈ ಸಂದೇಶಕ್ಕೆ ಪ್ರತಿಯಾಗಿ ಡಿಐಜಿ ರೂಪಾ ಕೂಡಾ ಧನ್ಯವಾದ ತಿಳಿಸಿದ್ದು, ನಿಮ್ಮಂತಹವರ ಮೆಚ್ಚುಗೆ ನನಗೆ ನೂರಾನೆಯ ಬಲ ಬಂದಿದೆ ಎಂದಿದ್ದಾರೆ. ಇದೀಗ ಸಿಎಂ ತಮಗೆ ನೋಟಿಸ್ ನೀಡಿರುವುದರಿಂದ ಬೇಸರಗೊಂಡಿರುವ ರೂಪಾ ಈ ಘಟನೆಯಿಂದಾಗಿ ನನಗೆ ಮತ್ತಷ್ಟು ಶತ್ರುಗಳು ಹಟ್ಟಿಕೊಂಡಿದ್ದಾರೆ. ಆದರೆ ಅಲ್ಲಿ ಏನೂ ನಡೀತಿಲ್ಲ ಎಂದ ಮೇಲೆ ನನ್ನನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
 
ಇದನ್ನೂ ಓದಿ.. ಮುಂದಿನ ಚುನಾವಣೆಯೇ ಸಿಎಂ ಸಿದ್ಧರಾಮಯ್ಯಗೆ ಕೊನೇ ಚುನಾವಣೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಡಿಐಜಿ ರೂಪಾ ಕಿರಣ್ ಬೇಡಿ ಶಶಿಕಲಾ ನಟರಾಜನ್ ಪರಪ್ಪನ ಅಗ್ರಹಾರ ಜೈಲು ರಾಜ್ಯ ಸುದ್ದಿಗಳು Dig Roopa Kiran Bedi Sasikala Natarajan State News Parappana Agrahara Jail

Widgets Magazine

ಸುದ್ದಿಗಳು

news

‘ನನ್ನ ಹೆಸರಲ್ಲೂ ರಾಮ ಇದ್ದಾನೆ, ನಾನೂ ಹಿಂದೂ’

ಮೈಸೂರು: ಹಿಂದೂಗಳು ಬಿಜೆಪಿಯವರ ಸೊತ್ತಲ್ಲ. ನನ್ನ ಹೆಸರಲ್ಲೂ ‘ರಾಮ’ ಇದ್ದಾನೆ. ಅಂದರೆ ನಾನೂ ಹಿಂದೂ ಎಂದು ...

news

ಮುಂದಿನ ಚುನಾವಣೆಯೇ ಸಿಎಂ ಸಿದ್ಧರಾಮಯ್ಯಗೆ ಕೊನೇ ಚುನಾವಣೆ

ಮೈಸೂರು: ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮುಂಬರುವ ಚುನಾವಣೆಗೆ ...

news

ವಿಶ್ವದ ಮೊದಲ ಸೌರ ಶಕ್ತಿ ಒಳಗೊಂಡ ಡೀಸೆಲ್ ಟ್ರೇನ್ ಗೆ ಚಾಲನೆ

ಭಾರತೀಯ ರೈಲ್ವೆ ಇಲಾಖೆ ವಿಶ್ವದ ಮೊದಲ ಪರಿಸರ ಸ್ನೇಹಿಯಾದ ಸೌರ ಶಕ್ತಿ /ಎಲೆಕ್ಟ್ರಿಕ್ ರೈಲಿಗೆ ಚಾಲನೆ ...

news

ರಾಜ್ಯದಲ್ಲಿ ಮಳೆಯಾಗುತ್ತಿಲ್ಲ ಎಂದು ಭಯವಾಗುತ್ತಿದೆ: ಸಿಎಂ

ಚಾಮರಾಜನಗರ: ರಾಜ್ಯದಲ್ಲಿ ಮಳೆಯಾಗುತ್ತಿಲ್ಲ ಎಂದು ಭಯವಾಗುತ್ತದೆ. ಹೀಗೆ ಮುಂದುವರಿದಲ್ಲಿ ಸಂಕಷ್ಟ ಸ್ಥಿತಿ ...

Widgets Magazine