ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು

Bangalore, ಶುಕ್ರವಾರ, 4 ಆಗಸ್ಟ್ 2017 (11:12 IST)

ಬೆಂಗಳೂರು: ಸತತ ಎರಡು ದಿನದಿಂದ ಐಟಿ ಅಧಿಕಾರಿಗಳ ತಪಾಸಣೆಯಿಂದ ತೀವ್ರ ಒತ್ತಡಕ್ಕೊಳಗಾಗಿರುವ ಸಚಿವ ಡಿಕೆ ಸಿವಕುಮಾರ್ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ.


 
ಡಿಕೆಶಿ ಕುಟುಂಬ ವೈದ್ಯ ಡಾ. ರಮಣ್ ರಾವ್ ಮತ್ತು ಇನ್ನೊಬ್ಬ ವೈದ್ಯರು ಡಿಕೆ ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ತಪಾಸಣೆ ನಡೆಸಲು ಭೇಟಿ ಕೊಟ್ಟಿದ್ದಾರೆ.
 
ಐಟಿ ದಾಳಿಯಿಂದ ಹೊರಗಿನ ಸಂಪರ್ಕಕ್ಕೆ ಅವಕಾಶವಿಲ್ಲದೇ, ಅಕ್ಷರಶಃ ಗೃಹಬಂಧನದಲ್ಲಿರುವ ಸಚಿವರಿಗೆ ರಕ್ತದೊತ್ತಡದಲ್ಲಿ ಏರುಪೇರಾಗಿರಬಹುದು ಎಂದು ಅಂದಾಜಿಸಲಾಗಿದೆ. ಸಕ್ಕರೆ ಖಾಯಿಲೆಯಿಂದಲೂ ಬಳಲುತ್ತಿರುವ ಡಿಕೆಶಿ ಆರೋಗ್ಯ ತಪಾಸಣೆಗೆ ಐಟಿ ಅಧಿಕಾರಿಗಳು ವೈದ್ಯರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
 
ಇದನ್ನೂ ಓದಿ.. ರಾಹುಲ್ ಗಾಂಧಿ ವಿರುದ್ಧ  ಸಿಟ್ಟಿಗೆದ್ದ ಸುಷ್ಮಾ ಸ್ವರಾಜ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ ಈಗ ನಂ.1

ನವದೆಹಲಿ: ರಾಜ್ಯಸಭೆಯಲ್ಲಿ ಇದುವರೆಗೆ ಅತೀ ದೊಡ್ಡ ಪಕ್ಷವೆಂಬ ಹೆಗ್ಗಳಿಕೆ ಹೊಂದಿದ್ದ ಕಾಂಗ್ರೆಸ್ ಇದೀಗ ಆ ...

news

ರಾಹುಲ್ ಗಾಂಧಿ ವಿರುದ್ಧ ಸಿಟ್ಟಿಗೆದ್ದ ಸುಷ್ಮಾ ಸ್ವರಾಜ್

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವರ್ತನೆಗೆ ...

news

ರಾಜ್ಯ ಕಾಂಗ್ರೆಸ್ ಗೆ ಇನ್ನೊಂದು ತಲೆನೋವು

ಬೆಂಗಳೂರು: ಗಜರಾತ್ ರಾಜ್ಯಸಭೆ ಚುನಾವಣೆಗೆ ಆಪರೇಷನ್ ಕಮಲ ಭೀತಿಗೆ ಸಿಲುಕಿ ಬೆಂಗಳೂರಿಗೆ ಬಂದು ಈಗಲ್ ಟನ್ ...

news

ಹಬ್ಬಕ್ಕೂ ಡಿಕೆಶಿಗೆ ಬಿಡುವಿಲ್ಲ

ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬ. ಆದರೆ ಐಟಿ ದಾಳಿಗೊಳಗಾಗಿರುವ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ...

Widgets Magazine