ಅತೀ ಭ್ರಷ್ಟರಲ್ಲಿ ಡಿಕೆಶಿವಕುಮಾರ್ ಉನ್ನತ ಸ್ಥಾನ ಹೊಂದಿದ್ದಾರೆ; ಆರೋಪ

ಬಳ್ಳಾರಿ, ಶನಿವಾರ, 16 ಮಾರ್ಚ್ 2019 (13:17 IST)

ಡಿ.ಕೆ.ಶಿವಕುಮಾರ್ ಈ ದೇಶಕಂಡ ಅತೀ ಹೆಚ್ಚು ಭ್ರಷ್ಟರಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ. ಹೀಗಂತ ಆರೋಪ ಕೇಳಿಬಂದಿದೆ.

ಗಣಿ ಭಾದಿತ ಜನರ ಮೂಲ ಸೌಕರ್ಯ, ಶಿಕ್ಷಣ, ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 15 ಸಾವಿರ ಕೋಟಿ ಹಣವನ್ನು ಲೂಟಿ ಮಾಡಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಹೊಣೆ ಹೊತ್ತ ಡಿ.ಕೆ.ಶಿವಕುಮಾರ್ ರವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಅರ್.ಹಿರೇಮಠ, ದೇಶಕಂಡ ಅತೀ ಹೆಚ್ಚು ಭ್ರಷ್ಟರಲ್ಲಿ ಡಿ.ಕೆ.ಶಿ ಕೂಡ ಉನ್ನತ ಸ್ಥಾನ ಹೊಂದಿದ್ದಾರೆ. ಈ ಬಗ್ಗೆ ನಾವು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರ  ಅಳಿಯ ಸಿದ್ಧಾರ್ಥ ಹಾಗೂ ಡಿ.ಕೆ.ಶಿ ವಿರುದ್ಧ ಪ್ರಕರಣಗಳು ದಾಖಲಾಗಿ ಸಾಬೀತಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಇದು ಸ್ವಾಗತಾರ್ಹವಾಗಿದೆ ಎಂದರು.

ಗಣಿ ಭಾದಿತರ ಜನರ ಹಣವನ್ನು ಕೊಳ್ಳೆ ಹೊಡೆಯಲು ಬಳ್ಳಾರಿಗೆ ಅಗಮಿಸಿದ ಡಿ.ಕೆ.ಶಿ ಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಸಂಪುಟ ಸ್ಥಾನದಿಂದ ಕೈ ಬಿಡಬೇಕು. ಗಣಿ ಬಾಧಿತರ ಹಣದ ಬಗ್ಗೆ ಪೈಸಾ ಟು ಪೈಸಾ   ಲೆಕ್ಕ ಕೇಳುವಲ್ಲಿ ಇಲ್ಲಿನ ಜನರು, ಸಂಘಟನೆಗಳು ಮುಂದಾಗಬೇಕು ಎಂದರು.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮನೆ ಮುಂದೆ, ರಸ್ತೆಬದಿಯಲ್ಲಿ ಕಾರು, ಬೈಕ್ ನಿಲ್ಲಿಸಿದಲ್ಲಿ ಬೀಳುತ್ತೇ ಬಾರೀ ದಂಡ

ಬೆಂಗಳೂರು : ಇನ್ನು ಮುಂದೆ ಮನೆ ಮುಂದೆ ಕಾರು, ಬೈಕ್ ನಿಲ್ಲಿಸಿದಲ್ಲಿ ದಂಡ ವಿಧಿಸುವುದಾಗಿ ರಾಜ್ಯ ಸರ್ಕಾರ ...

news

ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ವಿಚಾರ; ಸಿದ್ದರಾಮಯ್ಯನ ಕಾಲೆಳೆದ ಬಿಜೆಪಿ

ಬೆಂಗಳೂರು : ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ...

news

ಬಿಜೆಪಿಗೆ ಬಿಗ್ ಶಾಕ್; ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರಂತೆ ಈ ನಾಯಕರು

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲೇ ಇದೀಗ ಮಾಜಿ ಎಂಎಲ್ ಸಿ ...

news

ಇಂದು ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿರುವ ಮಾಜಿ ಸಚಿವ ಎ.ಮಂಜು

ಹಾಸನ : ಇಂದು ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ...

Widgets Magazine