ಶಾಸಕ ಸತೀಶ್ ಜಾರಕಿಹೊಳಿ ಹೇಳ್ತಿರೋದೇನು ಗೊತ್ತಾ?

ಬೆಳಗಾವಿ, ಶುಕ್ರವಾರ, 14 ಸೆಪ್ಟಂಬರ್ 2018 (14:49 IST)

ಕಾಂಗ್ರೆಸ್ ಹೈಕಮಾಂಡ್ ನಿಂದ ಜಾರಕಿಹೊಳಿ ಸಹೋದರರಿಗೆ ವಾರ್ನಿಂಗ್ ವಿಚಾರ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ಎಲ್ಲಿ ಹೊರಟಿದಕ್ಕೆ ವಾರ್ನಿಂಗಾ ಅಥವಾ ಹೋಗದಕ್ಕೆ ವಾರ್ನಿಂಗಾ..? ಯಾತಕ್ಕೆ ವಾರ್ನಿಂಗ್ ಅಂತ ಮರು ಪ್ರಶ್ನೆ ಮಾಡಿರುವ ಸತೀಶ್ ಜಾರಕಿಹೊಳಿ, ಈ ಪಾರ್ಟಲ್ಲಿ ನಾನು ಇಲ್ಲವೇ ಇಲ್ಲ. ನಮ್ ಪಾರ್ಟ್ ಬೇರೆ ಇದೆ. ನಾವು ಅಸಮಾಧಾನ ಆಗುವ ಅವಶ್ಯಕತೆ ಇಲ್ಲ. ನಮಗೆ ಯಾರೂ ವಾರ್ನಿಂಗ್ ಮಾಡುವ ಪ್ರಶ್ನೆ ಉದ್ಭವಿಸಲ್ಲ ಎಂದಿದ್ದಾರೆ.

ಕಾಂಗ್ರೆಸ್ ಬಿಡುವ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದರಲ್ಲಿ ನಮ್ಮ ಪಾತ್ರವಿಲ್ಲ. ರಮೇಶ್ ಜಾರಕಿಹೊಳಿ ಇರಬಹುದು. ಮತ್ಯಾರೊ ಬೇರೆಯವರು ಇರಬಹುದು. ಆಪರೇಷನ್ ಕಮಲ ಹೊಸದೇನಲ್ಲ. ಡೇ ಒನ್ ನಿಂದ ನಾಲ್ಕು ತಿಂಗಳಿಂದಲೂ ಅದು ಜಾರಿಯಲ್ಲಿದೆ. ಆದ್ರೆ ಸದ್ಯಕ್ಕೆ ಅಂತಹ ವಾತಾವರಣ ಇಲ್ಲ ಎಂದರು. ಅಸಮಾಧಾನ ಇರೋದು ನಿಜ. ನಮ್ಮ ಅಧ್ಯಕ್ಷರಿಗೆ ಎರಡು ಸಾರಿ ಭೇಟಿಯಾಗಿದ್ದೇವೆ. ವಿಷಯಗಳನ್ನು ಹೇಳಿದ್ದೇವೆ. ಹಬ್ಬ ಮುಗಿದ ಮೇಲೆ ಇನ್ನೊಮ್ಮೆ ಕುಡೋಣ ಎಂದಿದ್ದಾರೆ ಎಂದರು. 

ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಬಗ್ಗೆ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳ ಡಿಮ್ಯಾಂಡ್ ಇದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಬೇಕು ಅಂತಲ್ಲ. ನಾವು ಕಳೆದ ವರ್ಷ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲೆ ವಿಭಜನೆ ಮಾಡುವ ಅವಶ್ಯಕತೆ ಇದೆ. ಮಾಡಲೇ ಬೇಕು. ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕವಾಗಿದೆ ಎಂದರು.  
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಲುಷಿತ ನೀರು ಸರಬರಾಜು ಮಾಡುತ್ತಿರುವ ಪುರಸಭೆ ವಿರುದ್ಧ ಆಕ್ರೋಶ

ಒಂದೆಡೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದೆ. ಇನ್ನೊಂದು ಕಡೆ ಕಲುಷಿತ ನೀರನ್ನು ಸರಬರಾಜು ...

news

ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದ ಶಾಸಕ

ಬಿಜೆಪಿಯಲ್ಲಿ ನಾನು ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಯಾವ ಜೆಡಿಎಸ್ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ...

news

ಗಣೇಶ ಮೂರ್ತಿ ಮೆರವಣಿ: ಲಾಠಿ ಬೀಸಿದ ಪೊಲೀಸರು

ಗಣೇಶ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿ ಚಾರ್ಜ್ ನಡೆದ ಆರೋಪ ಕೇಳಿಬಂದಿದೆ.

news

ಬಿಲ್ಡಿಂಗ್ ಕುಸಿಯುವ ಭೀತಿ: ಮನೆತೊರೆದ ನೆರೆಹೊರೆಯವರು

ನಾಲ್ಕು ಅಂತಸ್ತಿನ ಬಿಲ್ಡಿಂಗ್ ಕುಸಿಯುವ ಭೀತಿ ಎದುರಾಗಿದೆ. ಈ ಕುರಿತು ಯಾರ ಬಳಿ ದೂರು ನೀಡಿದರು ಪ್ರಯೋಜನ ...

Widgets Magazine