ವಿದ್ವತ್ ಬಗ್ಗೆ ಭಾವುಕರಾಗಿ ಬರೆದುಕೊಂಡ ಡಾ.ರಾಜ್ ಮೊಮ್ಮಗ!

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (10:12 IST)

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗ್ಯಾಂಗ್ ನಿಂದ ಹಲ್ಲೆಗೊಳಗಾದ ವಿದ್ವತ್ ಬಗ್ಗೆ ಘಟನೆಗೆ ಸಾಕ್ಷಿಯಾಗಿದ್ದ ಡಾ. ರಾಜ್ ಮೊಮ್ಮಗ ಗುರು ರಾಜ್ ಕುಮಾರ್ ಮನದಾಳ ಹಂಚಿಕೊಂಡಿದ್ದಾರೆ.
 

ವಿದ್ವತ್ ಕುಟುಂಬಕ್ಕೆ ಸಮೀಪವರ್ತಿಗಳಾಗಿರುವ ಡಾ. ರಾಜ್ ಕುಟುಂಬ ಸದಸ್ಯರು ಈಗಾಗಲೇ ಆತನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಘಟನೆ ನಡೆಯುವಾಗ ಗುರು ರಾಜ್ ಕುಮಾರ್ ಅಲ್ಲಿಯೇ ಇದ್ದರು ಎನ್ನಲಾಗಿದೆ.
 
ಅಷ್ಟೇ ಅಲ್ಲದೆ, ವಿದ್ವತ್ ತಮ್ಮ ಮನೆ ಮಗನಂತೆ ತಮ್ಮ ಮಕ್ಕಳ ಜತೆಯೇ ಬೆಳೆದವನು ಎಂದು ಈಗಾಗಲೇ ಪುನೀತ್ ರಾಜ್ ಕುಮಾರ್ ಹೇಳಿಕೊಂಡಿದ್ದರು. ಇದೀಗ ಗುರು ರಾಜ್ ಕುಮಾರ್ ತನ್ನ ಸ್ನೇಹಿತನ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
 

‘ಪ್ರೈಮರಿ ಶಾಲೆಯಿಂದ ಜತೆಗಿದ್ದೇವೆ. ವಿದ್ವತ್ ನನ್ನ ಸಹೋದರನಿದ್ದಂತೆ. ಆತನಿಗೆ ನೋವಾದರೆ ನಮಗೆ ನೋವಾದಂತೆ. ಆದಷ್ಟು ಬೇಗ ಹುಷಾರಾಗು ಸಹೋದರ.. ನಿನ್ನ ಜತೆ ನಾನಿದ್ದೇವೆ’ ಎಂದಿದ್ದಾರೆ.
 
ಅಷ್ಟೇ ಅಲ್ಲದೆ, ‘ಕರ್ನಾಟಕದಲ್ಲಿ ಸುರಕ್ಷತೆಗೆ ಆದ್ಯತೆ ಇರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ತಪ್ಪಿದ್ದಲ್ಲ’ ಎಂದೂ ಸ್ಟೇಟಸ್ ಹಾಕಿದ್ದಾರೆ. ಅವರ ಈ ಸಂದೇಶಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವೇಗೌಡ ಹಂಗಿನಲ್ಲಿ ಬೆಳೆದಿಲ್ಲ- ಸಿದ್ದರಾಮಯ್ಯ

ರಾಜಕೀಯದಲ್ಲಿ ಎಚ್.ಡಿ.ದೇವೇಗೌಡ ಅವರ ಹಂಗಿನಲ್ಲಿ ಬೆಳೆದಿಲ್ಲ, ಸ್ವಂತ ಸಾಮರ್ಥ್ಯದಿಂದ ಬೆಳೆದಿದ್ದೇನೆ ಎಂದು ...

news

ಜೆಡಿಎಸ್ ಎರಡನೇ ಪಟ್ಟಿ ವಾರದಲ್ಲಿ ಬಿಡುಗಡೆ- ಕುಮಾರಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಎರಡನೇ ಪಟ್ಟಿ ...

news

ಈಶ್ವರಪ್ಪ ಬೆಂಬಲಕ್ಕೆ ನಿಂತ ರಾಯಣ್ಣ ಬ್ರಿಗೇಡ್ ಜೊತೆ ಮುರಳಿಧರ ರಾವ್ ಸಂಧಾನ ಇಂದು

ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಕ್ಕೆ ನಿಂತಿರುವ ರಾಯಣ್ಣ ಬ್ರಿಗೇಡ್ ಮುಖಂಡರು ...

news

ನಾ ಮಾಡಿದ್ದು ಸರಿಯೋ ತಪ್ಪೋ ನೀವೇ ಹೇಳಿ ಅಂದ್ರು ಪ್ರಕಾಶ್ ರೈ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಕಿಡಿ ಕಾರಿದ್ದಕ್ಕೆ ಸಚಿವರ ...

Widgets Magazine