ಮಹಾದಾಯಿ ವಿಚಾರದಲ್ಲಿ ಬಿಎಸ್‌ವೈ, ಪರಿಕ್ಕರ್‌ರಿಂದ ನಾಟಕ– ಸಿದ್ದರಾಮಯ್ಯ

ಹಾವೇರಿ, ಭಾನುವಾರ, 24 ಡಿಸೆಂಬರ್ 2017 (15:02 IST)

Widgets Magazine

ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಾಟಕವಾಡುತ್ತಿದ್ದು, ಸುಳ್ಳು ಭರವಸೆ ನೀಡಿದ ಯಡಿಯೂರಪ್ಪ ಈಗ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ನಾಟಕ ಬಯಲಾಗಿದೆ. ವಿವಾದ ಬಗೆಹರಿಸುವುದಾಗಿ ಅವರು ಸುಳ್ಳು ಭರವಸೆ ನೀಡಿದ್ದರು. ಆದರೆ, ವಿವಾದ ಬಗೆಹರಿದಿಲ್ಲ. ಇದರಿಂದ ಯಡಿಯೂರಪ್ಪ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದಿದ್ದಾರೆ.
 
ಈ ವಿಷಯವನ್ನು ಚುನಾವಣೆಗೆ ಬಳಸಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ. ಆದ್ದರಿಂದ ಮಹಾದಾಯಿ ವಿಚಾರದಲ್ಲಿ ನಾಟಕ ಶುರು ಮಾಡಿದ್ದಾರೆ. ಈಗ ಅದು ತಿರುಗುಬಾಣವಾಗಿದ್ದು, ರೈತರು ಬಿಜೆಪಿ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಕುಮ್ಮಕ್ಕಿಲ್ಲ ಎಂದು ತಿಳಿಸಿದ್ದಾರೆ.
 
ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸಿಗಾಗಿ ವೀರಶೈವ ಮತ್ತು ಲಿಂಗಾಯತರಿಂದ ಒಟ್ಟು ಐದು ಅರ್ಜಿಗಳು ಬಂದಿದ್ದು, ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಅಲ್ಪ ಸಂಖ್ಯಾತರ ಆಯೋಗಕ್ಕೆ ಕಳುಹಿಸಲಾಗಿತ್ತು. ಇದೀಗ ಆಯೋಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದೆ.ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದ ಅವರು ಯಡಿಯೂರಪ್ಪ ಮಾಡಿದ ಪಾಪಗಳ ಪರಿಹಾರಕ್ಕಾಗಿ ಪಶ್ಚಾತ್ತಾಪ ಯಾತ್ರೆ ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಲು ಅವಕಾಶವಿದ್ದರೆ ಪೊಲೀಸರು ಕಾನೂನು ಪ್ರಕಾರ ಕ್ರಮ ಜರುಗಿಸುತ್ತಾರೆ. ಅದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ಸಿದ್ದರಾಮಯ್ಯ ಮಹಾದಾಯಿ Yeddyurappa Siddaramaiah Mahadai

Widgets Magazine

ಸುದ್ದಿಗಳು

news

ಅಭ್ಯರ್ಥಿ ಹೆಸರು ಮತ್ತೆ ಘೋಷಿಸಿದ ಬಿಎಸ್‌ವೈ, ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ...

news

ಮತ್ತೆ ಮದುವೆಯಾದ ಎಚ್.ಡಿ.ರೇವಣ್ಣ, ಕಾರಣ ಗೊತ್ತಾ?

ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರು ಮತ್ತೆ ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ...

news

ಮಹಾದಾಯಿ ಹೋರಾಟಗಾರರು ಮುಖ್ಯಮಂತ್ರಿ ಮನೆಮುಂದೆ ಸತ್ಯಾಗ್ರಹ ನಡೆಸಲಿ ಎಂದ ಬಿಎಸ್‌ವೈ

ಮಹಾದಾಯಿ ಹೋರಾಟಗಾರರು ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸದೆ ಮುಖ್ಯಮಂತ್ರಿಯ ಮನೆ ಮುಂದೆ ...

news

ಸಲಿಂಗ ಕಾಮಕ್ಕೆ ಸಹಕಾರ ನೀಡದಕ್ಕೆ ಕೋಪಗೊಂಡು ಗುರುತು ಸಿಗದಂತೆ ಕೊಲೆಗೈದ

ಮಡಿವಾಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಲಿಂಗ ಕಾಮಕ್ಕೆ ಸಹಕಾರ ನೀಡದ್ದಕ್ಕೆ ಸಹದ್ಯೋಗಿಯನ್ನು ಹತ್ಯೆ ...

Widgets Magazine