ನಮ್ಮ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ: ಮಾಜಿ ಸಂಸದ ಶಿವರಾಮೇಗೌಡ

ಬೆಂಗಳೂರು, ಮಂಗಳವಾರ, 17 ಏಪ್ರಿಲ್ 2018 (12:00 IST)

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಮತ್ತಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದಾರೆ.
 
ಇದೀಗ ಆ ಪಟ್ಟಿಗೆ ಮಾಜಿ ಸಂಸದ ಸೇರಿದ್ದಾರೆ. ಗಂಗಾವತಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವರಾಮೇಗೌಡ ‘ನನಗೆ ಟಿಕೆಟ್ ನೀಡಿಲ್ಲ ಅಂತ ಬೇಸರವಿಲ್ಲ. ಆದರೆ ನಮ್ಮ ಸಮುದಾಯಕ್ಕೆ ಇಲ್ಲಿ ಟಿಕೆಟ್ ನೀಡದೇ ಬಿಜೆಪಿ ಅನ್ಯಾಯ ಮಾಡಿದೆ’ ಎಂದು ದೂರಿದ್ದಾರೆ.
 
ಪಂಚಮಸಾಲಿ ಸಮುದಾಯದವರಾದ ಶಿವರಾಮೇಗೌಡ ಗಂಗಾವತಿ ಟಿಕೆಟ್ ಗೆ ಬೇಡಿಕೆಯಿಟ್ಟಿದ್ದರು. ಆದರೆ ಇದೀಗ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಹೀಗಾಗಿ ಆಕ್ರೋಶ ವ್ಯಕ್ತಪಡಿಸಿರುವ ಅವರು ‘ನಮ್ಮ ಸಮುದಾಯದ 82 ಲಕ್ಷ ಮತದಾರರು ರಾಜ್ಯದಲ್ಲಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ, ಕಾಂಗ್ರೆಸ್ ನ ಟಿಕೆಟ್ ವಂಚಿತರಿಗೆ ಜೆಡಿಎಸ್ ಗಾಳ

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದಂತೆ ಕೆಲವು ಟಿಕೆಟ್ ವಂಚಿತ ...

news

ಪುತ್ರನಿಗಾಗಿ ಬೆವರು ಹರಿಸಲಿರುವ ಸಿಎಂ ಸಿದ್ದರಾಮಯ್ಯ

ಮೈಸೂರು: ವಿಧಾನಸಭೆ ಚುನಾವಣೆಗೆ ತಮ್ಮ ವರುಣಾ ಕ್ಷೇತ್ರವನ್ನು ಪುತ್ರ ಡಾ. ಯತೀಂದ್ರಗೆ ಬಿಟ್ಟುಕೊಟ್ಟಿರುವ ...

news

ಖರ್ಗೆ, ಪರಮೇಶ್ವರ್ ಒಂದಾಗಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲಿದ್ದಾರೆ!

ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿಎಂ ...

news

ಕರ್ನಾಟಕ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದಿನಿಂದ ಅಭ್ಯರ್ಥಿಗಳು ನಾಮಪತ್ರ ...

Widgets Magazine
Widgets Magazine