ನಾಟಿ ಮಾಡಲು ಕೂಲಿಗೆ ಬನ್ನಿ ಎಂದು ಸಿಎಂ ಎಚ್ ಡಿಕೆಗೇ ಆಹ್ವಾನ ನೀಡಿದ ರೈತ!

ಮಂಡ್ಯ, ಶುಕ್ರವಾರ, 10 ಆಗಸ್ಟ್ 2018 (11:29 IST)

ಮಂಡ್ಯ: ರೈತರನ್ನು ಹುರಿದುಂಬಿಸಲು ನಾಟಿ ಮಾಡಲು ಗದ್ದೆಗೆ ಇಳಿಯಲು ಹೊರಟಿರುವ ಸಿಎಂ ಕುಮಾರಸ್ವಾಮಿಗೆ ಮಂಡ್ಯದ ರೈತನೊಬ್ಬ ಸವಾಲು ಹಾಕಿದ್ದಾನೆ.
 

ರೈತರನ್ನು ಹುರಿದುಂಬಿಸಲು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸಲಿದ್ದಾರೆ.
 
ಈ ವಿಚಾರದ ಬಗ್ಗೆ ರೈತರೊಬ್ಬರು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ವ್ಯಂಗ್ಯ ಮಾಡಿದ್ದು, ತಮ್ಮ ಗದ್ದೆಗೆ ಮುಯ್ಯಾಳಾಗಿ ಕೆಲಸ ಮಾಡಲು ಬರುವಂತೆ ಆಹ್ವಾನ ನೀಡಿದ್ದಾರೆ. ನಿಮ್ಮನ್ನು ಕೆಲಸಕ್ಕೆ ಕರೆಸಿ ಕೂಲಿ ಕೊಡಲು ನಮ್ಮಲ್ಲಿ ದುಡ್ಡಿಲ್ಲ. ಹಾಗಾಗಿ ಮುಯ್ಯಾಳಾಗಿ ಬರಲು ಆಹ್ವಾನ ನೀಡಿದ್ದಾರೆ. ನಾಟಿ ಮಾಡುವುದರಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ. ರೈತರ ಬಗ್ಗೆ ನಿಜವಾಗಿ ಕಾಳಜಿಯಿದ್ದರೆ ಮೈ ಷುಗರ್ ಕಾರ್ಖಾನೆ ಪುನರಾರಂಭಿಸಿ ಎಂದು ಈ ವ್ಯಕ್ತಿ ಸವಾಲು ಹಾಕಿದ್ದಾರೆ. ಈತ ಬಿಜೆಪಿ ಕಾರ್ಯಕರ್ತ ಕೂಡಾ ಎಂಬ ಸುದ್ದಿಯೂ ಇದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದ ಡಿಸಿಎಂ ಪರಮೇಶ್ವರ್

ಮಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದು ಡಿಸಿಎಂ ಜಿ ಪರಮೇಶ್ವರ್ ...

news

ಹನಿಮೂನ್ ಗೆ ಊಟಿಗೆ ಹೋಗುವ ಪ್ಲ್ಯಾನ್ ಮಾಡಿದ್ದೀರಾ? ಹಾಗಿದ್ದರೆ ತಡೀರಿ!

ಬೆಂಗಳೂರು: ಕೇರಳ, ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

news

ಮತ್ತೊಂದು ದೋಸ್ತಿಗೆ ಪ್ರಧಾನಿ ಮೋದಿ ಭರ್ಜರಿ ಪ್ಲ್ಯಾನ್

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ತನ್ನ ಕಡೆಗೆ ಹೆಚ್ಚು ರಾಜಕೀಯ ...

news

ಪ್ರಧಾನಿ ಮೋದಿಯದ್ದು ದಲಿತ ವಿರೋಧ ಮನಸ್ಥಿತಿ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿಯದ್ದು ದಲಿತ ವಿರೋಧಿ ಮನಸ್ಥಿತಿ. ಆದರೆ ನಮ್ಮ ಪಕ್ಷ ದೇಶದ ಎಲ್ಲಾ ವರ್ಗದ ಜನರಿಗೆ ...

Widgets Magazine