ಹುಬ್ಬಳ್ಳಿಯಲ್ಲಿರುವ ಹೆಚ್ಡಿಕೆ ಮನೆಯಲ್ಲಿ ಅಗ್ನಿ ದುರಂತ

ಹುಬ್ಬಳ್ಳಿ, ಬುಧವಾರ, 4 ಅಕ್ಟೋಬರ್ 2017 (09:10 IST)

ಹುಬ್ಬಳ್ಳಿ: ನಗರದಲ್ಲಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದೆ.


ನಗರದ ಭೈರಿ ದೇವರಕೊಪ್ಪದ ಮಾಯಕಾರ ಕಾಲೋನಿಯಲ್ಲಿರುವ ನಿವಾಸದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ. ರಾತ್ರಿ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.

ಎರಡು ಸೋಫಾ ಸೆಟ್ ಬೆಂಕಿಗಾಹುತಿಯಾಗಿದ್ದು, ನಂತರ ಬೆಡ್ ರೂಮಿಗೂ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲ ವಸ್ತುಗಳ ಬೆಂಕಿಗೆ ಆಹುತಿಯಾಗಿವೆ. ಮನೆಯ ಕೆಲಸಗಾರರು ಮತ್ತು ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕೆಲಸಗಾರರು ಮನೆಯ ಮುಂದಿನ ಕಚೇರಿಯಲ್ಲಿ ಮಲಗಿದ್ದರಿಂದ ಅನಾಹುತ ತಪ್ಪಿದೆ‌.

11 ತಿಂಗಳ ಹಿಂದೆ ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಬೇಕು ಎಂಬ ದೃಷ್ಟಿಯಿಂದ  ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಶಿಕಲಾ ನಟರಾಜನ್ ಆಸೆಗೆ ಭಂಗ ತಂದ ಕಾರಾಗೃಹ ಇಲಾಖೆ

ಬೆಂಗಳೂರು: ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ...

news

ತಾಜ್ ಮಹಲ್ ಧ್ವಂಸಗೊಳಿಸಿದರೆ ಸಿಎಂ ಯೋಗಿಗೆ ಅಜಂ ಖಾನ್ ಬೆಂಬಲ ಕೊಡ್ತಾರಂತೆ!

ಲಕ್ನೋ: ವಿವಾದಿತ ಹೇಳಿಕೆಗಳನ್ನೇ ನೀಡುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತೊಮ್ಮೆ ತಮ್ಮ ಹುಳುಕು ...

news

ಜನರಕ್ಷಾ ಯಾತ್ರೆ: ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿ

ಮಂಗಳೂರು: ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆ ಖಂಡಿಸಿ ಕಣ್ಣೂರಿನ ...

news

ಯಕ್ಷಲೋಕದ ಮಹಾನ್ ಪ್ರತಿಭೆ ಚಿಟ್ಟಾಣಿ ಹೆಗಡೆ ಇನ್ನಿಲ್ಲ

ಬೆಂಗಳೂರು: ಗಂಡು ಕಲೆ ಯಕ್ಷಗಾನದ ರಾಜಕುಮಾರ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ...

Widgets Magazine
Widgets Magazine