ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರು ನೀರುಪಾಲು

ಮಂಗಳೂರು, ಮಂಗಳವಾರ, 7 ನವೆಂಬರ್ 2017 (10:17 IST)

ಮಂಗಳೂರು: ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿ ನಿನ್ನೆ ಈಜಲು ತೆರಳಿದ್ದ ಐವರು ಬಾಲಕರು ನೀರು ಪಾಲಾಗಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆಯಿಂದಲೂ ತೀವ್ರ ಹುಡುಕಾಟ ನಡೆಸುತ್ತಿದ್ದು, ಓರ್ವನ ಶವ ಪತ್ತೆಯಾಗಿದೆ.


ಶುಂಠಿಹಿತ್ಲು ನಿವಾಸಿ ಅಸ್ಲಾಂ(17), ರಮೀಝ್(16), ಅಜಾಮತ್‌(15), ಮುಭಾಷಿರ್‌(16), ಸಮಾದ್‌(17) ನೀರುಪಾಲಾದ ಬಾಲಕರು ಎನ್ನಲಾಗಿದೆ. ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಐವರು ಬಾಲಕರು ಈಜಲು ತೆರಳಿದ್ದು, ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಮೊಬೈಲ್‌ ಗೆ ಫೋನ್ ಮಾಡಿದರೆ ರಿಂಗ್ ಆಗುತ್ತಿದ್ದು, ಯಾರೂ ಕರೆ ಸ್ರೀಕರಿಸಲಿಲ್ಲ.

ಹುಡುಕಾಟ ನಡೆಸಿದಾಗ ಫಲ್ಗುಣಿ ನದಿ ಬಳಿ ಬಟ್ಟೆಗಳು ಪತ್ತೆಯಾಗಿದ್ದು, ನೀರು ಪಾಲಾಗಿರುವ ಶಂಕೆಯಲ್ಲಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೆಡ್ಡಿ ವಿರುದ್ಧ ಸಿಎಂ ಮಾಸ್ಟರ್ ಪ್ಲಾನ್: ಮತ್ತೆ ಜೈಲು ಪಾಲಾಗ್ತಾರ ಗಾಲಿ ಜನಾರ್ದನ ರೆಡ್ಡಿ?

ಬೆಂಗಳೂರು: ಅಕ್ರಮ ಗಣಿಗಾರಿಕೆಯ ಹಳೆ ಪ್ರಕರಣಗಳಿಗೆ ರಾಜ್ಯ ಸರ್ಕಾರ ಮರುಜೀವ ನೀಡುತ್ತಿದ್ದು, ಹೀಗಾಗಿ ...

news

ಮೊಮ್ಮಗನ ಸ್ಪರ್ಧೆಗೆ ದೇವೇಗೌಡರ ಕುಟುಂಬದಲ್ಲೇ ಭಿನ್ನಮತ?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ಗೌಡ ಸ್ಪರ್ಧೆ ಬಗ್ಗೆ ...

news

ಪ್ಯಾರಡೈಸ್ ಪೇಪರ್ಸ್ ಲೀಕ್! ತೆರಿಗೆ ವಂಚಕರ ಪಟ್ಟಿಯಲ್ಲಿ ಭಾರತದ ಪ್ರಮುಖರು!

ನವದೆಹಲಿ: ಪನಾಮಾ ಪೇಪರ್ಸ್ ನಂತಹದ್ದೇ ಮತ್ತೊಂದು ಪ್ಯಾರಾಡೈಸ್ ಪೇಪರ್ಸ್ ಮೂಲಕ ತೆರಿಗೆ ವಂಚಕರ ಪಟ್ಟಿ ...

news

ಪ್ರಧಾನಿ ಮೋದಿ ಭಗವದ್ಗೀತೆಯನ್ನೇ ತಿರುಚಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

Widgets Magazine