ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ

ಚಾಮರಾಜನಗರ, ಮಂಗಳವಾರ, 11 ಸೆಪ್ಟಂಬರ್ 2018 (20:17 IST)

ಬಿ ಆರ್ ಟಿ ಹುಲಿಯೋಜನೆ ವಿಭಾಗದಿಂದ ಇಲಾಖೆಯ ಹುತಾತ್ಮರ ದಿನಾಚರಣೆ ನಡೆಯಿತು.
ಚಾಮರಾಜನಗರದ ಅರಣ್ಯ  ಸಸ್ಯ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹುತಾತ್ಮರ ದಿನಾಚರಣೆಯಲ್ಲಿ  ಜಿಲ್ಲಾ ನ್ಯಾಯಾಧೀಶ ಬಸವರಾಜ್ ಹುತಾತ್ಮರ ಸ್ಮಾರಕಕ್ಕೆ ವಂದನೆ ಸಲ್ಲಿಸಿದರು. 

ಇದಕ್ಕೂ ಮೊದಲು ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ನ್ಯಾಯಾಧೀಶ ಬಸವರಾಜ್, ಚಾಮರಾಜನಗರದಲ್ಲಿ ಅರಣ್ಯ ಪ್ರದೇಶಕ್ಕನುಗುಣವಾಗಿ ಸಿಬ್ಬಂದಿ ಕೊರತೆ ಇದೆ. ಅರಣ್ಯದಲ್ಲಿ ನಡೆಯುವ ಅಕ್ರಮವನ್ನು ತಡೆಗಟ್ಟಲು ಹಾಗೂ ಸಿಬ್ಬಂದಿಯ ರಕ್ಷಣೆಗಾಗಿ ಅಗತ್ಯ ಶಸ್ತ್ರಾಸ್ತ್ರಗಳನ್ನು ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಹರೀಶ್ ಕುಮಾರ್, ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಡಿಸಿಎಫ್ ಶಂಕರ್ ಕಾರ್ಯಕ್ರಮದಲ್ಲಿದ್ದರು.
 
 

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಸ್ ಪ್ರಯಾಣ ದರ ಶೇ. 18ರಷ್ಟು ಏರಿಕೆ: ಗ್ರಾಹಕರ ಜೇಬಿಗೆ ಬಿತ್ತು ಹೊರೆ

ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ. ಬಸ್ ಪ್ರಯಾಣ ದರದಲ್ಲಿ ಶೇ.18ರಷ್ಟು ಏರಿಕೆ ಮಾಡಿ ಆಗಿದೆ. ಈ ...

news

ಪೊಲೀಸರ ಭರ್ಜರಿ ಕಾರ್ಯಾಚರಣೆ: ಖತರ್ನಾಕ್ ಕಳ್ಳನ ಬಂಧನ

45 ಸುಲಿಗೆ ಪ್ರಕರಣಗಳಲ್ಲಿ ಬೇಕಿದ್ದ ಖತರ್ನಾಕ್ ಕಳ್ಳನ ಬಂಧನ ಮಾಡಲಾಗಿದೆ.

news

ಮಾಧ್ಯಮದವರಿಗೆ ಅವಮಾನಿಸಿದ ಕಾರ್ಮಿಕ ಸಚಿವ

ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಮಾಧ್ಯಮದವರಿಗೆ ಕಾರ್ಮಿಕ ಸಚಿವ ಅವಮಾನಿಸಿದ ಘಟನೆ ನಡೆದಿದೆ.

news

ಹೈ-ಕ ದಿನಾಚರಣೆ: ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಲ್ಲಿ ಶಿಸ್ತು ಕ್ರಮ

ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸೆ. 17ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅದ್ಧೂರಿಯಿಂದ ...

Widgets Magazine
Widgets Magazine