ಗಣೇಶ ಮೂರ್ತಿ ಮೆರವಣಿ: ಲಾಠಿ ಬೀಸಿದ ಪೊಲೀಸರು

ಹುಬ್ಬಳ್ಳಿ, ಶುಕ್ರವಾರ, 14 ಸೆಪ್ಟಂಬರ್ 2018 (14:07 IST)

 

ಗಣೇಶ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿ ಚಾರ್ಜ್ ನಡೆದ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ ಮಂಟೂರ ರಸ್ತೆಯ ಮ್ಯಾಗನೀಸ್ ಪ್ಲಾಟ್ ಬಳಿ ಲಾಠಿ ಚಾರ್ಜ್ ನಡೆಸಲಾಗಿದೆ. ಒಂದೂವರೆ ಘಂಟೆಯಿಂದ ಡಿಜೆ ಸೌಂಡ್ ಹಚ್ಚಿಕೊಂಡು ನಿಂತಿದ್ದ ಗಣೇಶೋತ್ಸವ ಮಂಡಳಿಯವರಿಗೆ ಮುಂದೆ ಹೋಗಿ ಹೋಗಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಪೊಲೀಸರ ಮನವಿಗೂ ಮಣಿಯದ ಮಂಡಳಿಯವರು ಮೆರವಣಿಗೆ ಮೂಲಕ ಗಣಪತಿಯನ್ನು ಮಂಟಪಕ್ಕೆ ಕರೆದೊಯ್ಯುತ್ತಿದ್ದರು.

ಮಂಟೂರ ರಸ್ತೆಯ ಮ್ಯಾಗನೀಸ್ ಪ್ಲಾಟ್ ಗೆ ತಗೆದುಕೊಂಡು ಹೋಗಲಾಗುತ್ತಿದ್ದ ವೇಳೆ, ಡಿಜೆ ಅಬ್ಬರದಿಂದ ಆಕ್ರೋಶಿತರಾದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಮೆರವಣಿಗೆ ಅರ್ಧಕ್ಕೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಹೆಚ್ಚಿನ ಪೊಲೀಸ್ ಪಡೆ ಆಗಮನದೊಂದಿಗೆ ಪರಿಸ್ಥಿತಿ ಶಾಂತಗೊಂಡಿತು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಲ್ಡಿಂಗ್ ಕುಸಿಯುವ ಭೀತಿ: ಮನೆತೊರೆದ ನೆರೆಹೊರೆಯವರು

ನಾಲ್ಕು ಅಂತಸ್ತಿನ ಬಿಲ್ಡಿಂಗ್ ಕುಸಿಯುವ ಭೀತಿ ಎದುರಾಗಿದೆ. ಈ ಕುರಿತು ಯಾರ ಬಳಿ ದೂರು ನೀಡಿದರು ಪ್ರಯೋಜನ ...

news

ಸುಪ್ರೀಂಕೋರ್ಟ್‍ನ ನೂತನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ರಂಜನ್ ಗಗೋಯ್ ನೇಮಕ

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಪ್ರೀಂಕೋರ್ಟ್‍ನ ನೂತನ ಮುಖ್ಯ ನ್ಯಾಯಾಧೀಶರಾಗಿ ...

news

ಗುದದ್ವಾರದಲ್ಲಿ ಚಿನ್ನವಿಟ್ಟುಕೊಂಡು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್

ನವದೆಹಲಿ : 24 ವರ್ಷದ ವ್ಯಕ್ತಿಯೊಬ್ಬ ತನ್ನ ಗುದದ್ವಾರದಲ್ಲಿ 1 ಕೆಜಿ ಚಿನ್ನವನ್ನು ಇಟ್ಟುಕೊಂಡು ಅಕ್ರಮವಾಗಿ ...

news

ಮಾಜಿ ಪ್ರೇಯಸಿ ಮೇಲಿನ ಸಿಟ್ಟನ್ನು ಆಕೆ ಕೊಟ್ಟ ನಾಯಿಯ ಮೇಲೆ ತೀರಿಸಿಕೊಂಡ ಯುವಕ

ಕ್ಯಾಲಿಪೋರ್ನಿಯಾ : ಗರ್ಲ್ ಫ್ರೆಂಡ್ ಬ್ರೇಕ್ ಅಪ್ ಮಾಡಿಕೊಂಡಳು ಎನ್ನುವ ಕೋಪಕ್ಕೆ ಆಕೆ ಉಡುಗೊರೆಯಾಗಿ ...

Widgets Magazine