ಗೋವಾದ ಬೈನಾ ಬೀಚ್`ನಲ್ಲಿ ಕನ್ನಡಿಗರ 55 ಮನೆಗಳು ತೆರವು

ಗೋವಾ, ಮಂಗಳವಾರ, 26 ಸೆಪ್ಟಂಬರ್ 2017 (13:44 IST)

ಗೋವಾ ಕನ್ನಡಿಗರ ಮೇಲೆ ಅಲ್ಲಿನ ಸರ್ಕಾರ ಮತ್ತೆ ದೌರ್ಜನ್ಯ ಎಸಗಿದೆ. ಬೈನಾ ಬೀಚ್`ನಲ್ಲಿ ನೆಲೆಸಿದ್ದ ಕನ್ನಡಿಗರ ವಕ್ಕಲೆಬ್ಬಿಸಲಾಗಿದೆ. ಬೆಳ್ಳಂ ಬೆಳಗ್ಗೆ ಜೆಸಿಬಿ, ಟಿಪ್ಪರ್`ಗಳಿಂದ ಮನೆಗಳನ್ನ ಧರೆಗುರುಳಿಸಲಾಗಿದೆ. 


ಕನ್ನಡಿಗರಿಗೆ ಸೇರಿದ ಸುಮಾರು 55 ಮನೆ ಮತ್ತು ದೇಗುಲಗಳನ್ನ ತೆರವು ಮಾಡಲಾಗಿದೆ. ದಕ್ಷಿಣ ಗೋವಾದ ಡಿಸಿ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಗೋವಾ ಸರ್ಕಾರದ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 155 ಮನೆಗಳನ್ನ ತೆರವು ಮಾಡಲಾಗಿದ್ದು, ಇದೀಗ, ಉಳಿದ 55 ಕನ್ನಡಿಗರ ಮನೆಗಳನ್ನೂ ಕೆಡವಲಾಗಿದೆ. ಕನ್ನಡಿಗರು ಎಷ್ಟೆ ಗೋಗರೆದರೂ ಗೋವಾ ಸರ್ಕಾರ ಕೃಪೆ ತೋರಿಲ್ಲ. ಪುರಾತನ ದೇಗುಲವನ್ನೂ ಕೆಡವಲಾಗಿದೆ.

ಬೈನಾ ಬೀಚ್`ನಲ್ಲಿ ನೆಲೆಸಿದ್ದ ಕನ್ನಡಿಗರು ಆಧಾರ್, ರೇಶನ್ ಕಾರ್ಡ್ ಸಹ ಪಡೆದಿದ್ದರು. ಅಷ್ಟು ಮಾತ್ರವಲ್ಲದೆ ಪ್ರತೀ ವರ್ಷ ಸರ್ಕಾರಕ್ಕೆ ತೆರಿಗೆ ಕೂಡ ಪಾವತಿಸುತ್ತಿದ್ದರು. ಆದರೂ ಗೋವಾ ಸರ್ಕಾರ ಅವರ ಮನೆಗಳನ್ನ ಕೆಡವಿ ದೌರ್ಜನ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಕನ್ನಡಿಗರು ಅಕ್ರಮವಾಗಿ ನೆಲೆಸಿದ್ದಾರೆಂಬುದು ಗೋವಾ ಸರ್ಕಾರದ ನಿರ್ಧಾರವಾಗಿದ್ದು, ಕನ್ನಡಿಗರೆಂಬ ಕಾರಣಕ್ಕೆ ಕೊಂಚವೂ ಸಹಾನುಭೂತಿ ತೋರದೇ ತೆರವು ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೈನಾ ಬೀಚ್ ಗೋವಾ ಕನ್ನಡಿಗರು Goa Kannadigas Byna Beach

ಸುದ್ದಿಗಳು

news

ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ಕೋರ್ಟ್`ನಲ್ಲಿ ದೂರು ದಾಖಲು

ಕಾಂಗ್ರೆಸ್ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದಡಿ ಅರಣ್ಯ ಸಚಿವ ...

news

ಪತ್ನಿಯ ಮರ್ಮಾಂಗದ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಕಿರುಕುಳ ಕೊಟ್ಟ ಪತಿ

ಬೆಂಗಳೂರು: ಪತ್ನಿಯ ಮರ್ಮಾಂಗದ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಕಿರುಕುಳ ಕೊಟ್ಟ ಪತಿಯನ್ನು ಪೊಲೀಸರು ...

news

ತೇರದಾಳ ವಿಧಾನಸಭಾ ಕ್ಷೇತ್ರ: ಸಚಿವೆ ಉಮಾಶ್ರಿ ವಿರುದ್ಧ ಬಿಎಸ್‌ವೈ ಸ್ಪರ್ಧೆ ಸಾಧ್ಯತೆ

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ...

news

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತಕ್ಕೆ ಕಳಂಕ ಹಚ್ಚಲು ಹೊರಟಿದ್ದ ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆಯ ...

Widgets Magazine