ಋಣಮುಕ್ತ ಪ್ರಮಾಣಪತ್ರ ವಿತರಣೆಗೆ ಮುಂದಾದ ಸರಕಾರ

ಕಲಬುರಗಿ, ಶುಕ್ರವಾರ, 7 ಡಿಸೆಂಬರ್ 2018 (19:00 IST)

ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಋಣಮುಕ್ತ ಪ್ರಮಾಣ ಪತ್ರಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಸರಕಾರ ಈ ಹೊಸ ಕಾರ್ಯಕ್ರಮ ಜಾರಿಮಾಡುತ್ತಿದೆ.

ಕಲಬುರಗಿ  ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಹಾಗೂ ಸಹಕಾರ ಸಚಿವ  ಬಂಡೆಪ್ಪ ಖಾಶೆಂಪೂರ ಅವರು ಡಿಸೆಂಬರ್ 8ರಂದು ಸೇಡಂ ತಾಲೂಕಿನ ರೈತರಿಗೆ ಋಣಮುಕ್ತ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ. 

ಸೇಡಂ ತಾಲೂಕಿನ ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದ  ರೈತರಿಗೆ ಋಣಮುಕ್ತ ಪ್ರಮಾಣಪತ್ರ ವಿತರಣೆಯಾಗಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಋಣಮುಕ್ತ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಹಂತ ಹಂತವಾಗಿ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‍ಗಳಲ್ಲಿ 52586 ರೈತರು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 204270 ರೈತರು ಬೆಳೆ ಸಾಲ ಪಡೆದಿದ್ದು, ಎಲ್ಲ ರೈತರ ಬೆಳೆಸಾಲ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೊಡಗು ಸಂತ್ರಸ್ಥರಿಗೆ ಸಿಎಂ ಮಾಡಿದ್ದೇನು ಗೊತ್ತಾ?

ಪ್ರಕೃತಿ ವಿಕೋಪಕ್ಕೆ ಗುರಿಯಾಗಿ, ವಿಪರೀತ ಮಳೆಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ನೆರವಿಗೆ ಸಿಎಂ ...

news

ಕೋಟೆನಾಡಿನ ಜನರಿಗೆ ಶುರುವಾದ ಹೊಸ ಕಿರಿಕಿರಿ

ಕೋಟೆನಾಡಿನ ಜನರಿಗೆ ಕಳೆದ ಇಪ್ಪತ್ತು ದಿನಗಳಿಂದ ಹೊಸ ಕಿರಿಕಿರಿಯೊಂದು ಶುರುವಾಗಿದೆ.

news

ವ್ಯಾಪಕ ಹಗರಣಕ್ಕೆ ಖಂಡನೆ: 7ನೇ ದಿನಕ್ಕೆ ಮುಂದುವರಿದ ಸತ್ಯಾಗ್ರಹ

ವ್ಯಾಪಕ ಹಗರಣಗಳ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ.

news

ಚಳಿಗಾಲ ಅಧಿವೇಶನಕ್ಕೂ ಮುನ್ನ ದೇವರ ಮೊರೆ ಹೋದ ಸಿಎಂ

ಚಳಿಗಾಲ ಅಧಿವೇಶನ ಸುಸೂತ್ರವಾಗಿ ಸಾಗಬೇಕು ಎಂದು ಮುಖ್ಯಮಂತ್ರಿಗಳು ದೇವರ ಮೊರೆ ಹೋಗಿದ್ದಾರೆ.

Widgets Magazine