‘ರೆಸ್ಟ್ ಮಾಡಿ ಅಂದ್ರೂ ಕೇಳದೇ ದಲಿತರ ಗುಡಿಸಲುಗಳಿಗೆ ಭೇಟಿ ನೀಡ್ತಿದ್ದಾರೆ ಕುಮಾರಸ್ವಾಮಿ’

ಬೆಂಗಳೂರು, ಸೋಮವಾರ, 13 ನವೆಂಬರ್ 2017 (09:49 IST)

ಬೆಂಗಳೂರು:  ಕುಮಾರಸ್ವಾಮಿಗೆ ಎರಡೆರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ದಿನಕ್ಕೆ 10 ಗಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಸೂಚಿಸಿದ್ದಾರೆ. ಹಾಗಿದ್ದರೂ  ದಲಿತರ ಸಮಸ್ಯೆ ಆಲಿಸಲು ಅವರ ಗುಡಿಸಲುಗಳಿಗೆ ಭೇಟಿ ಕೊಡ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಪುತ್ರನ ಗುಣಗಾನ ಮಾಡಿದ್ದಾರೆ.


 
ಕೆಆರ್ ಪುರಂನ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ಕುಮಾರಸ್ವಾಮಿ ವಿಶ್ರಾಂತಿ ಅಗತ್ಯವಿದ್ದರೂ, ರಾಜ್ಯಾದ್ಯಂತ ಪ್ರವಾಸ ಮಾಡಲು ಪ್ರಾರಂಭಿಸಿದ್ದಾರೆ. ದಲಿತರ ಕಷ್ಟಕ್ಕೆ ಸ್ಪಂದಿಸಲು ಹಂಬಲಿಸುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.
 
ಇದೇ ವೇಳೆ ಬೇರೆ ರಾಜ್ಯಗಳಲ್ಲಿರುವಂತೆ ಕನ್ನಡಿಗರಲ್ಲೂ ಪ್ರಾದೇಶಿಕ ಶಕ್ತಿ ಮೇಲೆ ಪ್ರೀತಿಯೇಕೆ ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ರಾಷ್ಟ್ರೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕು. ಇದಕ್ಕಾಗಿ ಕುಮಾರಸ್ವಾಮಿ ನಾಯಕತ್ವ ಬೆಂಬಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಈಶ್ವರಪ್ಪ ತಲೆ, ಬಾಯಿಗೆ ಲಿಂಕ್ ಇಲ್ಲ’

ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ರಾಜಕೀಯ ನಾಯಕರ ಬಾಯಿಯಿಂದ ಎಲ್ಲೆ ಮೀರಿದ ಮಾತುಗಳು ಬರುವುದು ...

news

ಐಟಿ ದಾಳಿ ವೇಳೆ ಶಶಿಕಲಾ ನಟರಾಜನ್ ಬಗ್ಗೆ ಶಾಕಿಂಗ್ ವರದಿ!

ಚೆನ್ನೈ: ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಆಪ್ತರ ಸಂಸ್ಥೆಗಳ ಮೇಲೆ ಐಟಿ ...

news

ಪ್ರಬಲ ಭೂಕಂಪಕ್ಕೆ 135 ಜನರು ಬಲಿ

ನವದೆಹಲಿ: ಇರಾನ್-ಇರಾಖ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 135 ಕ್ಕೂ ಹೆಚ್ಚು ಜನ ...

news

ಪ್ರಧಾನಿ ಮೋದಿಯನ್ನು ಯಾವುದೇ ಕಾರಣಕ್ಕೂ ಅಗೌರವಿಸಲ್ವಂತೆ ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿಯ ವಿಚಾರಧಾರೆಗಳ ಮೇಲೆ ನನಗೆ ಕೆಡುಕು ಕಾಣಿಸಬಹುದು. ಆದರೆ ಯಾವುದೇ ಕಾರಣಕ್ಕೂ ...

Widgets Magazine
Widgets Magazine