ನೀವು ನಮಗೆ ಹೆಲ್ಪ್ ಮಾಡಿ ನಾವೂ ಮುಂದೆ ನಿಮಗೆ ಮಾಡ್ತೀವಿ: ಕಾಂಗ್ರೆಸ್ ಗೆ ಎಚ್ ಡಿ ಕುಮಾರಸ್ವಾಮಿ ಆಫರ್!

ಬೆಂಗಳೂರು, ಮಂಗಳವಾರ, 27 ಫೆಬ್ರವರಿ 2018 (09:21 IST)

ಬೆಂಗಳೂರು: ಮಾರ್ಚ್ 23 ರಂದು ನಡೆಯಲಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಸಹಕಾರ ಕೊಡುವುದಾಗಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಗೆ ಆಫರ್ ಕೊಟ್ಟಿದ್ದಾರೆ.
 

ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ 50 ಸದಸ್ಯರ ಬಲವಿಲ್ಲ. ಕೇವಲ 37 ಸದಸ್ಯರ ಬೆಂಬಲವಿದೆ. ಹೀಗಾಗಿ ಕಾಂಗ್ರೆಸ್ ತನ್ನ 2 ಅಭ್ಯರ್ಥಿಯನ್ನು ಗೆಲ್ಲಿಸಿ ಉಳಿದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಗೆ ನೀಡಿ ಎಂದು ಕುಮಾರಸ್ವಾಮಿ ಆಹ್ವಾನ ಕೊಟ್ಟಿದ್ದಾರೆ.
 
ಒಂದು ವೇಳೆ ಈಗ ಜೆಡಿಎಸ್ ಗೆ ಸಹಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಸಹಕಾರ ಕಾಂಗ್ರೆಸ್ ಗೆ ಇರುತ್ತದೆ ಎಂದಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ಕೊಟ್ಟು ಸಮ್ಮಿಶ್ರ ಸರ್ಕಾರ ರಚಿಸಬಹುದು ಎಂಬ ಸುಳಿವು ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೈಕೋ ಜೈಶಂಕರ್ ಆತ್ಮಹತ್ಯೆ

ಬೆಂಗಳೂರು: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅತ್ಯಾಚಾರವೆಸಗುತ್ತಿದ್ದ ಸೈಕೋ ಜೈಶಂಕರ್ ಪರಪ್ಪನ ಅಗ್ರಹಾರ ...

news

ಮೊಹಮ್ಮದ್ ನಲಪಾಡ್ ಗೆ ಇಂದೂ ಜೈಲೇ ಗತಿ

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ...

news

‘ಮಲ್ಯ ಆಸ್ಪತ್ರೆಗೆ ನಲಪಾಡ್ ವಿದ್ವತ್ ನೋಡಲು ಹೋಗಿದ್ದರೆ ತಪ್ಪೇನು?’

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ...

news

ಹೆಣ್ಣುಮಕ್ಕಳಿಗೊಂದು ಸಂತಸದ ಸುದ್ದಿ; 'ಅಮ್ಮ ಸ್ಕೂಟರ್' ಯೋಜನೆಗೆ ಚಾಲನೆ

ತಮಿಳುನಾಡು: ತಮಿಳುನಾಡಿನಲ್ಲಿ ಪ್ರಖ್ಯಾತಿ ಪಡೆದ ಅಮ್ಮ ಸರಣಿ ಯೋಜನೆಗಳ ಪೈಕಿ, ಮಾಜಿ ಸಿಎಂ ಜಯಲಲಿತಾ ಅವರ ...

Widgets Magazine
Widgets Magazine