‘ಜಮೀರ್ ಅಹಮ್ಮದ್ ರುಂಡ ತಗೊಂಡು ನಾವೇನು ಮಾಡೋಣ?’

Bangalore, ಸೋಮವಾರ, 24 ಜುಲೈ 2017 (17:11 IST)

ಬೆಂಗಳೂರು: ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ರುಂಡ ಕತ್ತರಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಹೇಳಿಕೆಗೆ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.


 
‘ಜಮೀರ್ ರುಂಡ ತಗೊಂಡು ನಾವೇನು ಮಾಡೋಣ ಸ್ವಾಮಿ? ಅವರಿಗೆ ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ. ನಮಗೆ ಒಳ್ಳೆಯ ಡ್ರೈವರ್ ಬೇಕು’ ಎಂದು ರೇವಣ್ಣ ಜಮೀರ್ ಅಹಮ್ಮದ್ ಮತ್ತು ಜೆಡಿಎಸ್ ನ ಇತರ ಬಂಡಾಯ ಶಾಸಕರ ವಿರುದ್ಧ ಗುಡುಗಿದ್ದಾರೆ.
 
ಅಲ್ಲದೆ, ಜೆಡಿಎಸ್ ನಿಂದ ಉಚ್ಛಾಟನೆಗೊಂಡಿರುವ ಈ ಶಾಸಕರು, ಕಾಂಗ್ರೆಸ್ ಕದ ತಟ್ಟುತ್ತಿರುವುದರ ಬಗ್ಗೆಯೂ ಅವರು ಟೀಕಾಪ್ರಹಾರ ನಡೆಸಿದ್ದಾರೆ. ಮೊನ್ನೆಯಷ್ಟೇ ಚಾಮರಾಜ ಪೇಟೆಯಲ್ಲಿ ದೇವೇಗೌಡರು ಅಭ್ಯರ್ಥಿ ಹಾಕಿದರೆ ಠೇವಣಿಯೂ ಬರೋಲ್ಲ. ಗೆದ್ದರೆ ರುಂಡ ಕತ್ತರಿಸಿಕೊಳ್ಳುತ್ತೀನಿ ಎಂದು ಜಮೀರ್ ಅಹಮ್ಮದ್ ಹೇಳಿದ್ದರು. ಇದಕ್ಕೆ ದೇವೇಗೌಡರೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪ್ರತಿ ಸವಾಲ್ ಹಾಕಿದ್ದರು.
 
ಇದನ್ನೂ ಓದಿ..  ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕೆ ಅಕ್ಷಯ್ ಕುಮಾರ್ ಕ್ಷಮೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಯಿಯ ಲಿವ್-ಇನ್ ಸಂಗಾತಿ ಕೊಲೆ ಮಾಡಿದ ಮಗ

ತನ್ನ ತಾಯಿಯೊಂದಿಗೆ ಲಿವ್ ಇನ್ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ವೃದ್ಧನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ...

news

ಎಣ್ಣೆ ಹೊಡೆಯೋರಿಗೊಂದು ಕಿಕ್ ಕೊಡುವ ಸುದ್ದಿ!

ಬೆಂಗಳೂರು: ಹೆದ್ದಾರಿಗಳ ಆಸುಪಾಸಿನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಇತ್ತೀಚೆಗಿನ ಕೇಂದ್ರ ಸರ್ಕಾರದ ...

news

ನೀರು, ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ,ಜೈಲಿಗೆ ಹೋದವರನ್ನೂ ಜನ ಮರೆಯೋಲ್ಲ: ಸಿಎಂ

ಬೆಂಗಳೂರು: ನೀರು ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ, ಜೈಲಿಗೆ ಹೋದವರನ್ನು ಜನ ಮರೆಯೋಲ್ಲ ಎಂದು ...

news

ನಿತಾರಿ ಸರಣಿ ಹತ್ಯೆ: ಆರೋಪಿ ಪಂಧೇರ್, ಸುರೀಂದರ್ ಕೋಲಿಗೆ ಗಲ್ಲು

ಗಾಜಿಯಾಬಾದ್: ನಿತಾರಿ ಸರಣಿ ಹತ್ಯೆ ಖ್ಯಾತಿಯ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಆತನ ಸಹಾಯಕ ...

Widgets Magazine