4 ವರ್ಷಗಳ ನಂತರ ಹೇಮಾವತಿ ಜಲಾಶಯ ಭರ್ತಿ

ಹಾಸನ, ಗುರುವಾರ, 12 ಜುಲೈ 2018 (15:54 IST)


ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ ಜೀವನದಿ ಹೇಮಾವತಿ, ಭರ್ತಿ ಹಂತ ತಲುಪಿದೆ. ಬರೋಬ್ಬರಿ 4 ವರ್ಷಗಳ ನಂತರ ಜಲಾಶಯದ ಒಡಲು ತುಂಬಿಕೊಳ್ಳುತ್ತಿರುವುದು ಹೇಮೆಯನ್ನೇ ನಂಬಿರುವ ಅನ್ನದಾತರು ಹಾಗೂ ಲಕ್ಷಾಂತರ ಜನರಲ್ಲಿ ಅಪಾರ ಖುಷಿ ತರಿಸಿದೆ.

2922 ಅಡಿ ಗರಿಷ್ಠಮಟ್ಟದ ಜಲಾಶಯದಲ್ಲಿ ಇಂದು 2913 ಅಡಿ ನೀರಿದ್ದು, ವರ್ಷಧಾರೆ ಹೀಗೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಹೇಮೆ ಒಡಲು ತುಂಬಿಕೊಳ್ಳಲಿದ್ದಾಳೆ.  ಡ್ಯಾಂ ಭರ್ತಿಗೆ ಕೇವಲ 9 ಅಡಿ ನೀರು ಬರಬೇಕಿದೆ.  

ಯಾವುದೇ ಕ್ಷಣದಲ್ಲೂ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಬಿಡುವ ಸಾಧ್ಯತೆಯಿದ್ದು, ನದಿಪಾತ್ರದ ಜನರಿಗೆ ಹೇಮಾವತಿ ಜಲಾಶಯದ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಮತ್ತೊಂದೆಡೆ ಮಲೆನಾಡು ಭಾಗದಲ್ಲಿ ಜೋರು ಮಳೆ ಮುಂದುವರಿದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತ್ರಿಬಲ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

ತನ್ನ ಪತ್ನಿಯ ಅಣ್ಣನ ಮನೆಗೆ ಬೆಂಕಿ ಹಚ್ಚಿದ್ದ ಹಂತಕನ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ...

news

ತೊಟ್ಟಿಲಿಗೆ ಕಟ್ಟಿದ ಸೀರೆ ಆ ಮಗುವಿನ ಸಾವಿಗೆ ಕಾರಣವಾಯ್ತು ಹೇಗೆ ಗೊತ್ತಾ?

ತೊಟ್ಟಲಿಗೆ ಕಟ್ಟಿದ್ದ ಸೀರೆಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಬಂಧಿಕರ ಮನೆಗೆ ಬಂದಾಗ‌ ...

news

ಪಿಒಪಿ ಗಣಪತಿ ಪ್ರತಿಷ್ಠಾನಕ್ಕೆ ಬೀಳುವುದೇ ಬ್ರೇಕ್?

ಗಣೇಶನ ಹಬ್ಬ ಸಮೀಪಿಸುತ್ತಿದ್ದಂತೆ ಗಣೇಶನ ಮೂರ್ತಿ ಕಲಾವಿದರು ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ...

news

ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದು ಯಾಕಾಗಿ ಗೊತ್ತೇ?

ನವದೆಹಲಿ : ಮದುವೆಯ ಪಾವಿತ್ರ್ಯತೆ ರಕ್ಷಿಸಲು 157 ವರ್ಷದ ಹಿಂದೆ ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ ಜಾರಿಯಾದ ...

Widgets Magazine